ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 22ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ"-2021

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 22ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  "ಪೂರ್ವ ಸಿದ್ಧತಾ ಸಭೆ" ಶ್ರೀಮಠದ ಭಕ್ತಾಭಿಮಾನಿಗಳೇ, ಮೇಲ್ಕಂಡ ಐತಿಹಾಸಿಕ ಕಾರ್ಯಕ್ರಮದ ಸಲುವಾಗಿ ಶ್ರೀಮಠದ ಭಕ್ತರ ಹಾಗೂ ಶಿಷ್ಯರ “ಪೂರ್ವ ಸಿದ್ಧತಾ ಸಭೆಯೊಂದನ್ನು ಕರೆಯಲಾಗಿದ್ದು, ತಾವುಗಳು ಈ ಸಭೆಗೆ ಆಗಮಿಸಿ, ತಮ್ಮ ಅನಿಸಿಕೆ, ಸಲಹೆ, ಸೂಚನೆಗಳನ್ನು, ಇತ್ಯಾದಿಗಳ ಮೂಲಕ ಮಾರ್ಗದರ್ಶನವನ್ನು ನೀಡಬೇಕೆಂದು ಕೋರುತ್ತೆವೆ, ಶ್ರೀ ಹಾಲ ಸೋಮೇಶ್ವರ ಮಹಾಸ್ವಾಮಿಗಳವರ ಸಂಕಲ್ಪದಂತೆ ನೆರವೇರಿಸುವುದು ನಮ್ಮೆಲ್ಲರ ಕರ್ತವ್ಯವಾದ್ದರಿಂದ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ, ಶ್ರೀ ಕ್ಷೇತ್ರ ನಾಥ ಹಾಲೇಶ್ವರನನ್ನು ಮತ್ತು ಉಭಯ ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ, ಸಭೆಯ ದಿನಾಂಕ: -15-02-2021ನೇ ಸೋಮವಾರ ಸಮಯ: ಸಂಜೆ 5:10  ಸ್ಥಳ:- ಹಾಲೇಶ್ವರ ದೇವಸ್ಥಾನ  ಇಂತಿ ತಮ್ಮ ವಿಶ್ವಾಸಿ ಶ್ರೀ ಹಾಲೇಶ್ವರ ಭಜನಾ ಸಂಘ ಲಕ್ಷ್ಮಣ ಕಾವಲಿ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ ಕಾರ್ಯದರ್ಶಿಗಳು ಶರಣಪ್ಪ ಹಾಲಪ್ಪ ಸಂದಿಗೌಡ್ರು 

Doni Halaswamy Jatre 2021

ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 22ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ pdf📂 ಕಾರ್ಯಕ್ರಮಗಳು ದಿನಾಂಕ: 3-04-2021ನೇ ಶನಿವಾರ ಬೆಳಿಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು. ದಿನಾಂಕ: 10-04-2021ನೇ ಶನಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.. ದಿನಾಂಕ: 13-04-2021ನೇ ಮಂಗಳವಾರ ಬೆಳಿಗ್ಗೆ  ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃುಗದ್ದುಗಿಗೆ ಮಹಾರುದ್ರಾಭಿಷೇಕ ತದನಂತರ  11:45 ಕ್ಕೆ  ಸಾಮೂಹಿಕ ವಿವಾಹಗಳು  ಜರುಗುವವು. ರಾತ್ರಿ 10:30 ಕೈ ಮುಳ್ಳುಗದ್ದುಗೆ  ಮಹೋತ್ಸವ ನೆರವೇರುವುದು.  ದಿನಾಂಕ: 14-04-2021ನೇ ಬುಧವಾರ ಬೆಳಿಗ್ಗೆ 10-30 ಕ್ಕೆ ಮಹಾಲಿಂಗನ ಗೌಡರ ಹಳೆಮನೆ ಇವರ ಮನೆಗೆ  ಶ್ರೀಗಳ ಸವಾರಿ ಭಿನ್ನ, ನಾಗಪ್ಪ ಹರ್ತಿ ಇವರ ಮನೆಗೆ ತೇಜಿ ಭಿನ್ನ ಸಾಯಂಕಾಲ  4-00 ಗಂಟೆಗೆ  ರಥೋತ್ಸವ  ಜರಗುವುದು ಹಾಗೂ ರಾತ್ರಿ 8-00 ಗಂಟೆಗೆ  ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.  ದಿನಾಂಕ: 15-04-2021ನೇ ಗುರುವಾರ ಬೆಳಿಗ್ಗೆ ...

ಗೋಹತ್ಯಾ_ನಿಷೇಧ ಕಾಯ್ದೆ ಅಭಿಯಾನಕ್ಕೆ ನಮ್ಮ ಸಹಮತ - ಅಮೃತೇಶ್ವರ ಸ್ವಾಮಿಜೀ.

ನಿಷೇಧಿಸಿ ನಿಷೇಧಿಸಿ #ಗೋಹತ್ಯೆ_ನಿಷೇಧಿಸಿ!! #ಗೋಹತ್ಯಾ_ನಿಷೇಧ ಕಾಯ್ದೆ ಅಭಿಯಾನಕ್ಕೆ ನಮ್ಮ ಸಹಮತ 👍👍 @ಮೌನ ಋಷಿ  @ಶ್ರೀ ವಿಶ್ವರಾಧ್ಯ ಹಾಲಸ್ವಾಮಿಜೀ @BS Yediyurappa @Chief Minister of Karnataka

ದೀಪಾವಳಿ ಐದು ದಿನದ ಹಬ್ಬ ಆಚರಣೆಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ.

ವಿವಿಧ ಬಗೆಯ ಧರ್ಮಗಳಲ್ಲಿ ಹಿಂದೂ ಧರ್ಮ ಸರ್ವ ಶ್ರೇಷ್ಠ ವಾಗಿದೆ. ಆದರೆ ಅದರ ವಿಶಾಲತೆ ಹಾಗೂ ಶ್ರೇಷ್ಠತೆ ಎಲ್ಲಕ್ಕಿಂತ ಭಿನ್ನ. ಹಿಂದೂಗಳು ಪ್ರಕೃತಿಯ ಆರಾಧಕರು. ವಾಯು, ಅಗ್ನಿ, ವರುಣ, ಇಂದ್ರ, ಪ್ರಥ್ವಿಗಳೆಲ್ಲವನ್ನೂ ದೇವರೆಂದು ಪರಿಗಣಿಸುತ್ತೇವೆ ಹಾಗೆಯೇ ಪೂಜಿಸುತ್ತೇವೆ ಸಹ. ಹಿಂದೂಗಳು ನಮ್ಮ ನಡುವೆ ಇರುವ ಕೆಲವು ಪ್ರಾಣಿ, ಪಕ್ಷಿ, ಗಿಡ-ಮರಗಳನ್ನು ಸಹ ಪವಿತ್ರವಾದದ್ದು ಹಾಗೂ ದೇವರೆಂದು ಪೂಜಾ ತಾಯಿ ಸ್ಥಾನ ಎಂದು ಭಾವಿಸುತ್ತೇವೆ . ಈ ಆಚರಣೆ ನಿನ್ನೆ ಮೊನ್ನೆಯಿಂದ ಬಂದ ಪದ್ಧತಿಯಲ್ಲ. ಇದಕ್ಕೆ ಸಾವಿರಾರು ವರ್ಷಗಳ ಕಥೆ-ಪುರಾಣಗಳಿವೆ. ದಿನನಿತ್ಯ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಹಸು. ಹಸುವನ್ನು ಭೂಮಿತಾಯಿ, ಸಕಲ ದೇವರ ಆವಾಸ ಸ್ಥಾನ ಎಂಬ ನಂಬಿಕೆಯೂ ಇದೆ. ಹಸುವಿನಿಂದ ಮನುಷ್ಯನಿಗೆ ಅನೇಕ ಪ್ರಯೋಜನಗಳಿವೆ. ನಿತ್ಯ ಬೇಕಾಗುವ ಹಾಲು ಮಜ್ಜಿಗೆ, ಸಗಣಿಯನ್ನು ಗೊಬ್ಬರ ತಯಾರಿಕೆಗೆ, ಗಂಜಲವನ್ನು ಔಷಧಿ ತಯಾರಿಸಲು ಉಪಯೋಗಿಸುತ್ತಾರೆ. ನಿತ್ಯವೂ ಈ ಗೋಮಾತೆಯ ಆರಾಧನೆ ಮಾಡಿದರೆ ನಮ್ಮ ಪಾಪಕರ್ಮಗಳು ನಾಶವಾಗಿ, ಪುಣ್ಯ ಪ್ರಾಪ್ತಿಯಾಗುತ್ತದೆ . ದೀಪಾವಳಿ ಎನ್ನುವ ಐದು ದಿನದ ಹಬ್ಬ ಆಚರಣೆಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಹಬ್ಬದ ನಾಲ್ಕನೇ ದಿನ ಗೋವಿಗೆ ಅಲಂಕಾರ ಮಾಡುವುದು, ವಿಶೇಷ ತಿನಿಸುಗಳನ್ನು ತಿನ್ನಿಸಿ, ಪೂಜೆ ಮಾಡಲಾಗುತ್ತದೆ...

SADHGURU SHIVAYOGI SRI HALASWAMY CHARITRE - KANNADA FILM (TRAILER) | ADH...

ಮಾತು ಮೌನವಾಗಿದೆ, ಕಾರ್ಗತ್ತಲು ಆವರಿಸಿದೆ, ಮೌನ ಮತ್ತು ಕಾರ್ಗತ್ತಲೆಯ ಮಧ್ಯೆ ದುಃಖದ ಛಾಯೆ ಹೃದಯಕ್ಕೆ ನಾಟಿದೆ.... ಮಹಾ ಸನ್ನಿಧಿ.... ಭಕ್ತಕೋಟಿ ಹೃದಯವು ಪರಿತಪಿಸುತ್ತಿದೆ .🙏🙏🙏🙇💐🌹- ಮೌನ ಋಷಿ

ಮಾತು ಮೌನವಾಗಿದೆ,  ಕಾರ್ಗತ್ತಲು ಆವರಿಸಿದೆ,  ಮೌನ ಮತ್ತು ಕಾರ್ಗತ್ತಲೆಯ ಮಧ್ಯೆ ದುಃಖದ ಛಾಯೆ ಹೃದಯಕ್ಕೆ ನಾಟಿದೆ....  ಮಹಾ ಸನ್ನಿಧಿ....   ಭಕ್ತಕೋಟಿ ಹೃದಯವು ಪರಿತಪಿಸುತ್ತಿದೆ .🙏🙏🙏🙇💐🌹 - ಮೌನ ಋಷಿ

ಪೂಜ್ಯ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ಅವರಿಗೆ ಭಕ್ತಿ ಪೂರ್ವಕ ಸಕಲ ಮತದ ಸದ್ಭಕ್ತರಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಾ॥ಡೋಣಿ  ಹೊನ್ನಾಳಿ ರಾಂಪುರದ ಶ್ರೀ ಶಿವಯೋಗಿ ಹಾಲಸ್ವಾಮೀಜಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಲಿಂಗೈಕ್ಯ  ಶ್ರೀ  ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ  ಭಕ್ತಿ ಪೂರ್ವಕ ಸಕಲ ಮತದ ಸದ್ಭಕ್ತರು ಭಾವಪೂರ್ಣ ಶ್ರದ್ಧಾಂಜಲಿ  ಸಲ್ಲಿಸಿದ್ದೆವು.ಈ ಸಂದರ್ಭದಲ್ಲಿ  ಶ್ರೀ ಹಾಲೇಶ್ವರ ದೇವಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ  ವಿಶ್ವರಾಧ್ಯ ಹಾಲಸ್ವಾಮಿಗಳು ,ಶ್ರೀ ಲಕ್ಷಣ ಕವಲಿ  ಶ್ರೀ  ಮುತ್ತೆಪ್ಪ ಈಳಗೇರ್,ಶ್ರೀ ಯಲ್ಲಪ್ಪ ತಳವಾರ, ಶ್ರೀ  ಶಂಕರಗೌಡರ ಜಾಯನಗೌಡರ್ ,ಶ್ರೀ ನಿಂಗಪ್ಪ ತಳವಾರ, ಮುಂತಾದವರು ಉಪಸ್ಥಿತರಿದ್ದರು. ಓಂ ಶಾಂತಿ ಓಂ ಶಾಂತಿ ದಿನಾಂಕ:-16/07/2020  ಗುರುವಾರ  ಶರಣಪ್ಪ.ಎಚ್.ಸಂದಿಗೌಡ್ರ ಕಾರ್ಯದರ್ಶಿಗಳು