ವಿವಿಧ ಬಗೆಯ ಧರ್ಮಗಳಲ್ಲಿ ಹಿಂದೂ ಧರ್ಮ ಸರ್ವ ಶ್ರೇಷ್ಠ ವಾಗಿದೆ. ಆದರೆ ಅದರ ವಿಶಾಲತೆ ಹಾಗೂ ಶ್ರೇಷ್ಠತೆ ಎಲ್ಲಕ್ಕಿಂತ ಭಿನ್ನ. ಹಿಂದೂಗಳು ಪ್ರಕೃತಿಯ ಆರಾಧಕರು. ವಾಯು, ಅಗ್ನಿ, ವರುಣ, ಇಂದ್ರ, ಪ್ರಥ್ವಿಗಳೆಲ್ಲವನ್ನೂ ದೇವರೆಂದು ಪರಿಗಣಿಸುತ್ತೇವೆ ಹಾಗೆಯೇ ಪೂಜಿಸುತ್ತೇವೆ ಸಹ. ಹಿಂದೂಗಳು ನಮ್ಮ ನಡುವೆ ಇರುವ ಕೆಲವು ಪ್ರಾಣಿ, ಪಕ್ಷಿ, ಗಿಡ-ಮರಗಳನ್ನು ಸಹ ಪವಿತ್ರವಾದದ್ದು ಹಾಗೂ ದೇವರೆಂದು ಪೂಜಾ ತಾಯಿ ಸ್ಥಾನ ಎಂದು ಭಾವಿಸುತ್ತೇವೆ . ಈ ಆಚರಣೆ ನಿನ್ನೆ ಮೊನ್ನೆಯಿಂದ ಬಂದ ಪದ್ಧತಿಯಲ್ಲ. ಇದಕ್ಕೆ ಸಾವಿರಾರು ವರ್ಷಗಳ ಕಥೆ-ಪುರಾಣಗಳಿವೆ.
ದಿನನಿತ್ಯ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಹಸು. ಹಸುವನ್ನು ಭೂಮಿತಾಯಿ, ಸಕಲ ದೇವರ ಆವಾಸ ಸ್ಥಾನ ಎಂಬ ನಂಬಿಕೆಯೂ ಇದೆ. ಹಸುವಿನಿಂದ ಮನುಷ್ಯನಿಗೆ ಅನೇಕ ಪ್ರಯೋಜನಗಳಿವೆ. ನಿತ್ಯ ಬೇಕಾಗುವ ಹಾಲು ಮಜ್ಜಿಗೆ, ಸಗಣಿಯನ್ನು ಗೊಬ್ಬರ ತಯಾರಿಕೆಗೆ, ಗಂಜಲವನ್ನು ಔಷಧಿ ತಯಾರಿಸಲು ಉಪಯೋಗಿಸುತ್ತಾರೆ. ನಿತ್ಯವೂ ಈ ಗೋಮಾತೆಯ ಆರಾಧನೆ ಮಾಡಿದರೆ ನಮ್ಮ ಪಾಪಕರ್ಮಗಳು ನಾಶವಾಗಿ, ಪುಣ್ಯ ಪ್ರಾಪ್ತಿಯಾಗುತ್ತದೆ .
ದೀಪಾವಳಿ ಎನ್ನುವ ಐದು ದಿನದ ಹಬ್ಬ ಆಚರಣೆಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಹಬ್ಬದ ನಾಲ್ಕನೇ ದಿನ ಗೋವಿಗೆ ಅಲಂಕಾರ ಮಾಡುವುದು, ವಿಶೇಷ ತಿನಿಸುಗಳನ್ನು ತಿನ್ನಿಸಿ, ಪೂಜೆ ಮಾಡಲಾಗುತ್ತದೆ.
ದೇವರುಗಳ ಆವಾಸಸ್ಥಾನ
ಮನುಷ್ಯನ ಅನೇಕ ಅವಶ್ಯಕತೆಗಳನ್ನು ಈಡೇರಿಸುವ ಕಾಮಧೇನು ದೇವಾನು ದೇವತೆಗಳ ಆವಾಸ ಸ್ಥಾನ ಎಂದು ಪರಿಗಣಿಸಲಾಗಿದೆ. ಇದರ ಆರಾಧನೆ ಹಾಗೂ ಪೂಜೆಯಿಂದ ಪುಣ್ಯ ಪ್ರಾಪ್ತಿಯಾಗುವುದೆಂದು ವೇದಗಳಲ್ಲೂ ಸಹ ಉಲ್ಲೇಖವಿದೆ. ಕಾಮಧೇನುವನ್ನು ಪೂಜಿಸುವುದರಿಂದ ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ಕರ್ಮಗಳು ಸಹ ತೊಳೆದುಹೋಗುತ್ತವೆ. ಒಮ್ಮೆಲೇ ಎಲ್ಲಾ ದೇವರನ್ನು ಪೂಜಿಸಿರುವ ಪುಣ್ಯವು ಪ್ರಾಪ್ತಿಯಾಗಿ, ಜೀವನದಲ್ಲಿ ಅನೇಕ ಅದೃಷ್ಟಗಳು ಕೈಗೂಡಿ ಬರುತ್ತವೆ. ಭಗವತ್ ಗೀತೆ, ಮಹಾ ಭಾರತ ಸೇರಿದಂತೆ ಅನೇಕ ಹಿಂದೂ ಪವಿತ್ರ ಗ್ರಂಥಗಳಲ್ಲಿ ಕಾಮಧೇನುವಿನ ಮಹಿಮೆ ಹಾಗೂ ಶ್ರೇಷ್ಠತೆಯ ಬಗ್ಗೆ ವರ್ಣಿಸಿರುವುದನ್ನು ಕಾಣಬಹುದು.
ಗೋವಿಗೆ ಹೇಳುವ ಮಂತ್ರಗಳು
1. "ಸರ್ವಕಾಮದುಧೇ ದೇವಿ ಸರ್ವತಿರ್ಥಿಭಿಶೇಚಿನಿ,
ಪಾವನೇ ಸುರಭಿ ಶ್ರೇಷ್ಠೆ ದೇವಿ ತುಭ್ಯಂ ನಮೋಸ್ತುತೇ."
2. "ಲಕ್ಷ್ಮೀರ್ಯ ಲೋಕಪಾಲನಂ ಧೇನುರೂಪೇಣ ಸಂಸ್ಥಿತಾ,
ದೃತಂ ವಹತಿ ಯಜ್ಞಾರ್ಯ ಮಮ ಪಾಪಂ ವ್ಯಾಪೋಹತು."
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ