ವಿಷಯಕ್ಕೆ ಹೋಗಿ

Doni Halaswamy Jatre Mahotsava-2025 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೫



ಜಾತ್ರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ


ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ, ಸಾಮೂಹಿಕ ವಿವಾಹಗಳು, ದೀಕ್ಷಾ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ.
ದಿನಾಂಕ 20.03.2025ನೇ ಗುರುವಾರರಂದು ರಾತ್ರಿ 8:00 ಕ. ಗ್ರಾಮದ ಸಕಲ ಸದ್ಭಕ್ತರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಈ ವರ್ಷದ ಹಾಲಪ್ಪಜ್ಜನ ಜಾತ್ರೆಯ ರಣಗಂಬ ಸ್ಥಾಪಿಸುವ ಮೂಲಕ ವಿದ್ಯುಕ್ತವಾಗಿ ಜಾತ್ರಾ ವಿಧಿ ವಿಧಾನಗಳು ಆರಂಭವಾಗುತ್ತವೆ.
ರಣಗಂಬ 
ದಿನಾಂಕ: 27-03-2025ನೇ ಗುರುವಾರರಂದು ಸಾಯಂಕಾಲ 4-00 ಗಂಟೆಗೆ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ(ksrtc) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.

ದಿನಾಂಕ: 30-03-2025ನೇ ರವಿವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃ ಗದ್ದುಗಿಗೆ ಮಹಾರುದ್ರಾಭಿಷೇಕ. ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ, 
ಶ್ರೀ ಷ||ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ 
ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳುಗದ್ದುಗೆ ಮಹೋತ್ಸವ ನೆರವೇರುವುದು.
ದಿನಾಂಕ: 31-03-2025ನೇ ಸೋಮವಾರದಂದು 10-30 ಕ್ಕೆ ಶ್ರೀ ಮಹಾಲಿಂಗನಗೌಡ್ರು ಹಳೇಮನಿ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ,
ಶ್ರೀ ನಾಗಪ್ಪ ಹರ್ತಿ ಇವರ ಮನೆಗೆ ತೇಜಿ ಭಿನ್ನ,( ಶ್ರೀ ಬಿ.ಎಸ್ ಕೆರೆ ವಕೀಲರು ಇವರ ಮನೆಯಿಂದ ರಥೋತ್ಸವಕ್ಕೆ ಹೂವಿನ ಸೇವೆ.) ಸಾಯಂಕಾಲ 5:00 ಗಂಟೆಗೆ ಮಹಾರಥೋತ್ಸವ ಜರಗುವುದು. 
ಮತ್ತು ರಾತ್ರಿ 7-00 ಗಂಟೆಗೆ ಸಂಗೀತ ಕಾರ್ಯಕ್ರಮ : ಶ್ರೀ ದುರ್ಗಾದೇವಿ ಗಾಯನ ಸಂಘ ನಾವಲಗಿ ತಾ|| ಬನಹಟ್ಟಿ ಜಿ|| ಬಾಗಲಕೋಟೆ ಹಾಗೂ ಶ್ರೀ ಬಕೇಶ್ವರ ಗಾಯನ ಸಂಘ ಸಾ|| ಬಾಡಗಿ,  ತಾ|| ಬಿಳಗಿ  ಜಿ|| ಬಾಗಲಕೋಟೆ ಮತ್ತು ಬೀರಲಿಂಗೇಶ್ವರ ಜಾನಪದ ಕಲಾ ತಂಡ ಡೋಣಿ. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. 
ದಿನಾಂಕ: 01-04-2025 ನೇ ಮಂಗಳವಾರದಂದು ಸಾಯಂಕಾಲ 6:00 ಗಂಟೆಗೆ ಕಡುಬಿನ ಕಾಳಗ ಜರುಗುವುದು.
ರಾತ್ರಿ 10 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ನಾಟ್ಯ ಸಂಘ ಡೋಣಿ 
ಇವರಿಂದ “ಗರುಡ ರಾಜ್ಯದಲ್ಲಿ ಘಟಸರ್ಪ ಅರ್ಥಾತ್: ಬೆಂಕಿಯಲ್ಲಿ ಅರಳಿದ ಹೂವು”. ಎಂಬ ಸುಂದರ ಸಾಮಾಜಿಕ ನಾಟಕ ಇರುತ್ತದೆ.
ದಿನಾಂಕ 05-4-2025 ನೇ ಶನಿವಾರದಂದು ಶ್ರೀ ಹಾಲೇಶ್ವರ ಜಾತ್ರಾ ಅಂಗವಾಗಿ “ರಾಯಣ್ಣ ಎಕ್ಸ್ಪ್ರೆಸ್ ಗ್ರೂಪ್” ಮತ್ತು 
“ಆರ್ ಜೆ ಸರಕಾರ ಗ್ರೂಪ್” ಇವರ ವತಿಯಿಂದ ರಾಜ್ಯಮಟ್ಟದ ಟಗರಿನ ಕಾಳಗ ಏರ್ಪಡಿಸಲಾಗಿದೆ.


ದಾಸೋಹ ಸೇವೆ ಗ್ರಾಮಗಳು: 
ಡೋಣಿ ಹಾಗೂ ಡೋಣಿತಾಂಡ, ಕದಾಂಪುರ, ಚುರ್ಚಿಹಾಳ, ಡಂಬಳ, ಅತ್ತಿಕಟ್ಟಿ, ಯಕ್ಲಾಸಪುರ, ಕೊರ್ಲಹಳ್ಳಿ, ಬೀಡನಾಳ, ಬೂದಿಹಾಳ, ಬೆಣ್ಣಿಹಳ್ಳಿ, ವಿರುಪಾಪುರ, ಮುಷ್ಠಿಕೊಪ್ಪ, ಹಳ್ಳಿಕೇರಿ, ದಿಂಡೂರ, ಬೀಡನಾಳ ತಾಂಡ, ಬಸಾಪುರ, ಶಿಂಗಟಾಲಕೇರಿ ತಾಂಡ, ಪೇಠಾಲೂರು, ಕವಲೂರು, ಗಂಗಾಪೂರ, ಹೊಸಡಂಬಳ, ಶಿಂಗಟಾಲೂರ, ತಿಪ್ಪಾಪುರ. ಹಾಗೂ ಸುತ್ತಮುತ್ತಲಿನ ಗ್ರಾಮದವರಿಂದ. ಈ ಎಲ್ಲ ಕಾರ್ಯಕ್ರಮಗಳು ಡೋಣಿ ಮತ್ತು ಡೋಣಿತಾಂಡಾದ ಸಮಸ್ತ ಸದ್ಭಕ್ತರಿಂದ ಸ್ತ್ರೀ ಶಕ್ತಿ ಸಂಘಗಳು, ಯುವಕ ಮಂಡಳಿಗಳು ಭಜನಾ ಸಂಘಗಳು ಇವರಿಂದ ನೆರವೇರುವುದು.
ಉತ್ಸವ ಸಂಘ-ಸಮಿತಿಗಳು : 
ಶ್ರೀ ಹಾಲೇಶ್ವರ ಭಜನಾ ಸಂಘ. ಶ್ರೀ ಈಶ್ವರ ಸೇವಾ ಸಮಿತಿ, ಶ್ರೀ ಶರಣ ಬಸವೇಶ್ವರ ಭಜನಾ ಸಂಘ, ಶ್ರೀ ಸಿದ್ದಲಿಂಗೇಶ್ವರ ಯುವಕ ಮಂಡಳಿ. ಶ್ರೀ ಬೀರಲಿಂಗೇಶ್ವರ ಜನಪದ ಕಲಾ ತಂಡ. ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆ, ಶ್ರೀ ದುರ್ಗಮ್ಮ ದೇವಿ ಭಜನಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಡೋಣಿ, ಶ್ರೀ ವೀರಭದ್ರೇಶ್ವರ ಹಾಗೂ ಮಾರುತೇಶ್ವರ ಟ್ರಸ್ಟ. ಶ್ರೀ ಮಾಳಿಂಗರಾಯ ಡೋಳ್ಳಿನ ಮೇಳ. ಡಾಕ್ಟರ್ ಶ್ರೀ ಬಿ.ಆರ್ ಅಂಬೇಡ್ಕರ್ ಸಮಿತಿ. ಭಗತ್ ಸಿಂಗ್ ಅಭಿಮಾನಿ ಬಳಗ. 
ಶ್ರೀ ವೀರಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘ. ಜಾಮಿಯಾ ಮಸೀದಿ ಕಮೀಟಿ. ಶ್ರೀ ನಡದಮ್ಮ ಭಜನಾ ಸಂಘ. ಬಂಜಾರಾ ನೃತ್ಯ ಕಲಾ ತಂಡ,ಡೋಣಿತಾಂಡಾ

ದೀಕ್ಷಾ ಅಯ್ಯಾಚಾರಕ್ಕೆ ಸಂಪರ್ಕಿಸಿರಿ :
ಶಿವಯ್ಯ ಕಲ್ಲೂರು ಮಠ       : 8861295526
ಕಿರಣಸ್ವಾಮಿ ಗುರಮ್ಮನಮಠ  : 8105545109

*ಸಾಮೂಹಿಕ ವಿವಾಹ ನೋಂದಣಿಗಾಗಿ ಸಂಪರ್ಕಿಸಿ*
ಯಮನಪ್ಪ ಈಳಿಗೇರ      : 9731960804
ಈಶಪ್ಪ ಮೇಟಿ                : 8867881496
ಶರಣಪ್ಪ ಜಂತ್ಲಿ               : 9008697905 
ಮಂಜುನಾಥ್ ತಳವಾರ   : 6362476781  
ಶಂಕರಗೌಡ ಹೊಸಮನಿ  : 9740622928 
ವಿನಾಯಕ ಬೆಳಿ ್ಳ          : 9964996434
ಸಲ್ಮಾನ್ ಚಿಕ್ಕೋಪ್ಪ        : 8105253190
ರಮೇಶ್ ಗಾಳಪ್ಪನವರ    : 7353437419 
ವಿ.ಸೂ ಬಾಲ್ಯ ವಿವಾಹ ಹಾಗೂ ಮರು ವಿವಾಹ ಅವಕಾಶ ಇರುವುದಿಲ್ಲ ನೋಂದಣಿಗೆ ಕೊನೆಯ ದಿನಾಂಕ: 21-03-2025 

ದಾಸೋಹ ಸೇವೆ ಗ್ರಾಮಗಳು:  ಡೋಣಿ ಹಾಗೂ ಡೋಣಿ ತಾಂಡ, ಕದಾಂಪುರ, ಚುರ್ಚಿಹಾಳ, ಹೊಸಡಂಬಳ, ಅತ್ತಿಕಟ್ಟಿ, ಯಕ್ಲಾಸಪುರ, ಕೊರ್ಲಹಳ್ಳಿ, ಬೀಡನಾಳ ಹಾಗೂ ಬೀಡನಾಳ ತಾಂಡ, ಬೂದಿಹಾಳ, ಬೆಣ್ಣಿಹಳ್ಳಿ, ವಿರುಪಾಪುರ, ಮುಸ್ಠಿಕೊಪ್ಪ, ಹಳ್ಳಿಕೇರಿ, ದಿಂಡೂರ, ಬಸಾಪುರ, ತಿಪ್ಪಾಪುರ, ಹಾಗೂ ಸುತ್ತ ಮುತ್ತಲಿನ ಗ್ರಾಮದವರಿಂದ ಈ ಎಲ್ಲ ಕಾರ್ಯಕ್ರಮಗಳು ಡೋಣಿ ಮತ್ತು ಡೋಣಿತಾಂಡಾದ ಸಮಸ್ತ ಸದ್ಭಕ್ತರಿಂದಹಾಗೂ ಸ್ತ್ರೀಶಕ್ತಿ ಸಂಘಗಳು, ಯುವಕ ಮಂಡಳಿಗಳು ಭಜನಾ ಸಂಘಗಳು ಇವರಿಂದ ನೆರವೇರುವುದು, ಸ್ವಾಗತ ಕೋರುವವರು ಶ್ರೀ ಹಾಲೇಶ್ವರ ದೇವಸ್ಥಾನ ಮತ್ತು ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು.

ಹಾಲಸ್ವಾಮಿ ಮಠದ ಭಕ್ತರು  
ಡೋಣಿ ಹಾಲಸ್ವಾಮಿಜೀ ಜಾತ್ರೆ ಕಾರ್ಯಕ್ರಮ - 2025
Sri Sadguru Shivayogi Halasomeshwara Maha Swamiji.Doni


                               

ಸಮಸ್ತ ಮನುಕುಲಕ್ಕೆ ಹೊಸ ದಿನ ಹೊಸತನ ತರಲಿ
ಸಿಹಿಯಾದ ಬೆಲ್ಲ ಕಹಿಯಾದ ಬೇವು ಆರೋಗ್ಯ ಇಮ್ಮಡಿಯಾಗಲಿ 
ಹೊಸ ಯುಗಾದಿ ಆನಂದ ತರಲಿ.
ನವ ವಸಂತದ(ಯುಗದಿ) ಹಬ್ಬದ ಶುಭಾಶೀರ್ವಾದಗಳು. 

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ 
ಹಾಲಸ್ವಾಮಿ ಮಠದ ಭಕ್ತರು 
Halaswamy Math

                      

ಬಂಜಾರಾ ನೃತ್ಯ ಕಲಾ ತಂಡ,ಡೋಣಿ ತಾಂಡದ 


 
   ವೀರಪ್ಪಪೂರ ಗ್ರಾಮಸ್ಥರು

          ಬೀಡನಾಳ ಗ್ರಾಮಸ್ಥರು

       ಮುಸ್ಠಿಕೋಪ್ಪ ಗ್ರಾಮಸ್ಥರು

 
        ಬಸಾಪುರ ಗ್ರಾಮಸ್ಥರು

    ಕುರ್ಲಹಳ್ಳಿ ಮತ್ತು ಪ್ಲಾಟ್

ಬೆಣ್ಣೆಹಳ್ಳಿ ಗ್ರಾಮಸ್ಥರು

 ಡೋಣಿ ತಾಂಡ

ಹೊಸ ಡಂಬಳ

ಚುರ್ಚಿಹಾಳ 

ಬೂದಿಹಾಳ ಗ್ರಾಮಸ್ಥರು

ತಿಪ್ಪಪುರ ಗ್ರಾಮಸ್ಥರು

ದಿಂಡೂರು ತಾಂಡಾದ ಸದ್ಭಕ್ತರಿಂದ ಜಾತ್ರಾ ಮಹೋತ್ಸವಕ್ಕೆ ಕಾಣಿಕೆಯನ್ನು ಅರ್ಪಿಸಲಾಯಿತು.


ಜಾತ್ರಾ ದಾಸೋಹಕ್ಕೆ ಡೋಣಿ ತಾಂಡದ ತಾಯಂದಿರೆಲ್ಲ ಸೇರಿ ಹಸನ ಮಾಡುತ್ತಿರುವುದು.

ಗ್ರಾಮದ ಸೈನಿಕರಿಂದ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತಗಳು






                             

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀಗುರು ಹಾಲಸ್ವಾಮಿಗಳ ಡೋಣಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ2026: ಭಕ್ತಿಯ ಪರಾಕಾಷ್ಠೆ, ಒಗ್ಗಟ್ಟಿನ ಸಂಕಲ್ಪಗ್ರಾಮದಲ್ಲಿ ಮೊಳಗಿದ ಸಡಗರದ ಕಹಳೆ.

ಶ್ರೀ ಗುರು ಹಾಲಸ್ವಾಮಿಗಳ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ: ಭಕ್ತಿಯ ಪರಾಕಾಷ್ಠೆ, ಒಗ್ಗಟ್ಟಿನ ಸಂಕಲ್ಪ ಗ್ರಾಮದಲ್ಲಿ ಮೊಳಗಿದ ಸಡಗರದ ಕಹಳೆ ಪವಿತ್ರ ಪುಣ್ಯಕ್ಷೇತ್ರದ ಆರಾಧ್ಯ ದೈವವಾದ ಶ್ರೀ ಗುರು ಹಾಲಸ್ವಾಮಿಗಳ ವಾರ್ಷಿಕ ಜಾತ್ರಾ ಮಹೋತ್ಸವದ-2026, ನಿಮಿತ್ತ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ನಡೆದ ಈ ಸಭೆಯು ಗ್ರಾಮಸ್ಥರ ಒಗ್ಗಟ್ಟು ಹಾಗೂ ಶ್ರದ್ಧೆಗೆ ಸಾಕ್ಷಿಯಾಯಿತು. ಹಿರಿಯರ ಮಾರ್ಗದರ್ಶನ - ಭಕ್ತರ ಸಂಕಲ್ಪ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮದ ಹಿರಿಯರು ಅತ್ಯಂತ ಉತ್ಸಾಹದಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. "ಗುರುಗಳ ಸೇವೆ ನಮ್ಮ ಭಾಗ್ಯ, ಈ ಬಾರಿಯ ಜಾತ್ರೆಯು ಇಡೀ ನಾಡೇ ಮೆಚ್ಚುವಂತೆ ನಡೆಯಬೇಕು" ಎಂದು ಆಶಿಸಿದರು. ವಿಶೇಷವಾಗಿ, ಯುವಕರು ಮತ್ತು ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ "ಹೆಗಲಿಗೆ ಹೆಗಲು ಕೊಟ್ಟು" ಕಾರ್ಯನಿರ್ವಹಿಸಲು ಸನ್ನದ್ಧರಾದರು. " ಶ್ರೀ ಗುರು ಹಾಲಪ್ಪಜ್ಜನ ಈ ಬಾರಿಯ ಉತ್ಸವದಲ್ಲಿ ಯಾವುದೇ ಕುಂದು-ಕೊರತೆಗಳು ಬಾರದಂತೆ ನಾವು ನೋಡಿಕೊಳ್ಳುತ್ತೇವೆ. ಇದು ಕೇವಲ ಸಭೆಯಲ್ಲ, ಇದು ನಮ್ಮ ಭಕ್ತಿಯ ಸಂಕಲ್ಪ" ಎಂದು ಹಿರಿಯರು ಭಾವಪೂರ್ಣವಾಗಿ ನುಡಿದರು. ಶಿಸ್ತುಬದ್ಧ ಆಯೋಜನೆ ಜಾತ್ರೆಯ ಪ್ರತಿಯೊಂದು ಹಂತದಲ್ಲೂ ಅಚ್ಚುಕಟ್ಟುತನ ಕಾಯ್ದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ರಥೋತ್ಸವದ ಸಿದ್ಧತೆ: ಅಲಂಕಾರ...

​🚩 ಡೋಣಿ ಗ್ರಾಮದ ಶ್ರೀಗುರು ಹಾಲೇಶನ ರಣಗಂಬ: ಭಕ್ತಿ ಭಾವದ ವೈಭವದ ಸಂಗಮ 🚩​

​🚩 ಶ್ರೀ ಗುರು ಹಾಲೇಶನ ರಣಗಂಬ: ಭಕ್ತಿ ಭಾವದ ವೈಭವದ ಸಂಗಮ 🚩 ​ಇಂದು ನಮ್ಮ ಗ್ರಾಮದಲ್ಲಿ ಶ್ರೀ ಗುರು ಹಾಲೇಶನ ರಣಗಂಬ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಹಾಗೂ ಅತ್ಯಂತ ಅಚ್ಚುಕಟ್ಟಾಗಿ ನೆರವೇರಿತು. ಭಕ್ತಿ ಮತ್ತು ಪರಂಪರೆಯ ಈ ಸಮಾಗಮಕ್ಕೆ ಗ್ರಾಮದ ಸಮಸ್ತ ಭಕ್ತವೃಂದ ಸಾಕ್ಷಿಯಾಯಿತು. ​🥁 ಸಾಂಸ್ಕೃತಿಕ ಮೆರುಗು ​ಕಾರ್ಯಕ್ರಮಕ್ಕೆ ಕಳೆ ತಂದಿದ್ದು ಅಬ್ಬರದ ಡ್ರಮ್ ಸೆಟ್ ಮೇಳ ಮತ್ತು ನಾಡಿನ ಸಂಸ್ಕೃತಿಯ ಪ್ರತೀಕವಾದ ಡೊಳ್ಳಿನ ಮೇಳ . ತಾಳ-ಲಯಗಳ ಈ ಜುಗಲ್‌ಬಂದಿ ನೆರೆದಿದ್ದವರಲ್ಲಿ ಹೊಸ ಚೈತನ್ಯ ತುಂಬಿತು. ಇನ್ನು ಸೋಗಲದ ಆರತಿಯನ್ನು ಹಿಡಿದು ಶಿಸ್ತಿನಿಂದ ಸಾಗುತ್ತಿದ್ದ ತಾಯಂದಿರ ಪಾದಯಾತ್ರೆ ಮತ್ತು ಅವರ ಭಕ್ತಿಭಾವ ಕಾರ್ಯಕ್ರಮಕ್ಕೆ ದೈವಿಕ ಮೆರುಗನ್ನು ನೀಡಿತು. ​✨ ಪೂಜ್ಯರ ದಿವ್ಯ ಸನ್ನಿಧಿ ​ಶ್ರೀಮಠದ ಹಿರಿಯ ಪೂಜ್ಯರಾದ ಶ್ರೀ ಗುರು ಹಾಲ ಸೋಮೇಶ್ವರ ಹಾಲ ಸ್ವಾಮಿಗಳ ಆಶೀರ್ವಾದ, ಕಿರಿಯ ಪೂಜ್ಯರಾದ ಶ್ರೀ ಅಮೃತೇಶ್ವರ ಶ್ರೀಗಳ ಮಾರ್ಗದರ್ಶನ ಹಾಗೂ ಮೌನ ಋಷಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ಬಹಳ ಶ್ರದ್ಧ...

ಹಾಲಪ್ಪಜ್ಜನ ಪವಾಡ!ಕಳಸವು ರಥದತ್ತ ಸಾಗುತ್ತಿರುವಾಗ ಅನಿರೀಕ್ಷಿತವಾಗಿ ಸುರಿದ ಮಳೆರಾಯನ ಕೃಪಾಶೀರ್ವಾದ ಇಡೀ ಗ್ರಾಮವನ್ನೇ ಮಡಿಯಾಗಿಸಿತು.

ಶ್ರೀಗುರು ಹಾಲೇಶನ ರಥದ ಕಳಸಾರೋಹಣ:  ಭಕ್ತಿ-ಭಾವದ ಮಳೆಯಲ್ಲಿ ಮಿಂದೆದ್ದ ಡೋಣಿ ಗ್ರಾಮ ಡೋಣಿ ಗ್ರಾಮ: ಆಧ್ಯಾತ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ಸಂಗಮಕ್ಕೆ ಸಾಕ್ಷಿಯಾದ ಡೋಣಿ ಗ್ರಾಮದಲ್ಲಿ, ಶ್ರೀಗುರು ಹಾಲಪ್ಪಜ್ಜನ ರಥದ ಕಳಸಾರೋಹಣ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನೆರವೇರಿತು. ಭಕ್ತರ ಸಾಗರ, ಮಂಗಳವಾದ್ಯಗಳ ನಿನಾದ ಮತ್ತು ಮಳೆರಾಯನ ಆಶೀರ್ವಾದದ ನಡುವೆ ಈ ದಿವ್ಯ ಕಾರ್ಯಕ್ರಮವು ಗ್ರಾಮದ ಇತಿಹಾಸದಲ್ಲಿ ಒಂದು ಸ್ಮರಣೀಯ ಪವಾಡದಂತೆ ಭಾಸವಾಯಿತು. ನೂತನ ಗೃಹದಿಂದ ಭಕ್ತಿಯ ಪಯಣ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ್ (KSRTC) ಅವರ ನೂತನ ನಿವಾಸದಿಂದ ಈ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹೊಸ ಮನೆಯ ಸಡಗರದೊಂದಿಗೆ, ಮನೆಯಿಂದ ಪ್ರಥಮ ಬಾರಿಗೆ ಪವಿತ್ರ ಕಳಸವನ್ನು ತರುವ ಮೂಲಕ ತಳವಾರ್ ಕುಟುಂಬವು ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಿತು. ವೈಭವದ ಮೆರವಣಿಗೆ ಮತ್ತು ಸಾಂಸ್ಕೃತಿಕ ನಿನಾದ ಮೆರವಣಿಗೆಯ ಉದ್ದಕ್ಕೂ ಡೊಳ್ಳು ಮತ್ತು ಡ್ರಮ್ ಸೆಟ್ ಮೇಳಗಳ ಗಂಭೀರ ನಿನಾದ ಮುಗಿಲು ಮುಟ್ಟಿತ್ತು. ಮುತ್ತೈದೆಯರು ಮಂಗಳಾರತಿಯನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದರೆ, ಇಡೀ ವಾತಾವರಣವು ಮಂಗಳಮಯವಾಗಿತ್ತು. ಭಕ್ತಿಯ ಹೊರೆ: ಶ್ರೀ ಯಲ್ಲಪ್ಪ ತಳವಾರ್ ಅವರ ಕಿರಿಯ ಪುತ್ರರಾದ ಮಂಜುನಾಥ್ ತಳವಾರ್ ಅವರು ಶ್ರೀ ಗುರು ಹಾಲೇಶನ ರಥದ ಕಳಸವನ್ನು ಅತ್ಯಂತ ಭಕ್ತಿಪೂರ್ವಕವಾಗಿ ತಮ್...