ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Doni Halaswamy Jatre Mahotsava-2025 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೫

ಜಾತ್ರಾ  ಕಾರ್ಯಕ್ರಮದ ಆಹ್ವಾನ ಪತ್ರಿಕೆ ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ, ಸಾಮೂಹಿಕ ವಿವಾಹಗಳು, ದೀಕ್ಷಾ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ. ದಿನಾಂಕ 20.03.2025ನೇ ಗುರುವಾರರಂದು ರಾತ್ರಿ 8:00 ಕ. ಗ್ರಾಮದ ಸಕಲ ಸದ್ಭಕ್ತರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಈ ವರ್ಷದ ಹಾಲಪ್ಪಜ್ಜನ ಜಾತ್ರೆಯ ರಣಗಂಬ ಸ್ಥಾಪಿಸುವ ಮೂಲಕ ವಿದ್ಯುಕ್ತವಾಗಿ ಜಾತ್ರಾ ವಿಧಿ ವಿಧಾನಗಳು ಆರಂಭವಾಗುತ್ತವೆ. ರಣಗಂಬ  ದಿನಾಂಕ: 27-03-2025ನೇ ಗುರುವಾರರಂದು ಸಾಯಂಕಾಲ 4-00 ಗಂಟೆಗೆ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ(ksrtc) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು. ದಿನಾಂಕ: 30-03-2025ನೇ ರವಿವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃ ಗದ್ದುಗಿಗೆ ಮಹಾರುದ್ರಾಭಿಷೇಕ.  ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ  ಹಾಗೂ ಅಯ್ಯಾಚಾರ ಕಾರ್ಯಕ್ರಮ,  ಶ್ರೀ ಷ||ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ  ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳುಗದ್ದುಗೆ ಮಹೋತ್ಸವ ನೆರವೇರ...

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ"

 ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  "ಪೂರ್ವ ಸಿದ್ಧತಾ ಸಭೆ" ಶ್ರೀಮಠದ ಭಕ್ತಾಭಿಮಾನಿಗಳೇ, ದಿ,30/03/2025 ನೇ ರವಿವಾರ ರಿಂದ , ದಿ,1,042025 ನೇ ಮಂಗಳವಾರ ನಡೆಯುವ ಶ್ರೀ ಗುರು ಹಾಲಸೋಮೇಶ್ವರ  ಸಾನಿಧ್ಯದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಮತ್ತು ಶ್ರೀ ಮಠದ ಸಮಸ್ತ ಸದ್ಭಕ್ತರ ಸೇವೆ ಸಹಕಾರದೊಂದಿಗೆ ಪ್ರತಿ ವರ್ಷದ ಪದ್ದತಿಯಂತೆ ಶ್ರೀ ಗುರು ಹಾಲಸ್ವಾಮಿ ಮಠದ ಪರಂಪರೆಯ ಜಾತ್ರೋತ್ಸವ ,ಧರ್ಮ ಜಾಗೃತಿ ಸಮಾರಂಭನಡೆಸಬೇಕೆನ್ನುವ ವಿಚಾರವನ್ನು ಈಗಾಗಲೇ ಯುಗಾದಿ ಪಾಂಡ್ಯ ಅಮವಾಸ್ಯೆ ಶುಭದಿನ ಎಲ್ಲಾ ಸದ್ಭಕ್ತರಿಗೆ ತಿಳಿಸಿದಂತೆ ದಿನಾಂಕ ಮತ್ತು ಸಮಾರಂಭ ಪತ್ರಿಕೆ ತಯಾರಿಸಲಾಗಿದೆ. ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಮಸ್ತ ಸದ್ಭಕ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ, ಕಾರ್ಯಕ್ರಮದ ಸಲಹೆ ಸೂಚನೆಗಳನ್ನು ನೀಡಬೇಕೆಂದು ಈ ಮೂಲಕ ಉಭಯ ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ತಿಳಿಸುತ್ತಿದ್ದೆವೆ. ಸಭೆಯ ದಿನಾಂಕ: 20.02-2025ನೇ   ಮತ್ತು 21-02-2925 ಸಮಯ: ಸಂಜೆ 5:10  ಸ್ಥಳ:- ಹಾಲೇಶ್ವರ ದೇವಸ್ಥಾನ  ಇಂತಿ ತಮ್ಮ ವಿಶ್ವಾಸಿ ಶ್ರೀ ಹಾಲೇಶ್ವರ ಭಜನಾ ಸಂಘ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ

ಶ್ರೀ ಮಠದ ಜೀರ್ಣೋದ್ಧಾರಕ್ಕಾಗಿ ಸದಾ ಕಾಲ ಶ್ರಮಿಸಿದವರು ನಿಮ್ಮ ಅಗಲುವಿಕೆ ಶ್ರೀಮಠಕ್ಕು ಮತ್ತು ಗ್ರಾಮಕ್ಕೂ ತುಂಬಲಾರದ ನಷ್ಟ ಉಂಟಾಗಿದೆ ನಿಮ್ಮ ಕುಟುಂಬಕ್ಕೂ ಮತ್ತು ಆಪ್ತ ಬಳಗಕ್ಕೂ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಹಾಗೂ ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲೆಂದು ಶ್ರೀ ಗುರು ಹಾಲೇಶ್ವರರಲ್ಲಿ ಪ್ರಾರ್ಥಿಸುತ್ತೇವೆ

ಶರಣಪ್ಪ ಸಂಧಿವಾಡ ಅಂದರೆ ಸೇವೆಯನ್ನೇ ಜೀವಾಳ ವಾಗಿಸಿಕೊಂಡವರು ಸದಾಕಾಲ ಜನರ ಕಷ್ಟಗಳಿಗೆ ಸ್ಪಂದಿಸುವಂತ ಹೃದಯವಂತ ಡೋಣಿ ಗ್ರಾಮದ ಅಕ್ಕರೆಯ ಮಗನಾಗಿ ಭೇದಭಾವ ಎನ್ನದೆ ಎಲ್ಲರೊಂದಿಗೆ ಬೆರೆಯುವ ಭಾವಜೀವಿ ಶ್ರೀ ಮಠದ ಜೀರ್ಣೋದ್ಧಾರಕ್ಕಾಗಿ ಸದಾ ಕಾಲ ಶ್ರಮಿಸಿದವರು ಮತ್ತು ಶ್ರೀಮಠದ ಪರಮ ಆಪ್ತ ಶಿಷ್ಯರಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವಂಥವರು ನಿಮ್ಮ ಅಗಲುವಿಕೆ ಶ್ರೀಮಠಕ್ಕು ಮತ್ತು ಗ್ರಾಮಕ್ಕೂ ತುಂಬಲಾರದ ನಷ್ಟ ಉಂಟಾಗಿದೆ ನಿಮ್ಮ ಕುಟುಂಬಕ್ಕೂ ಮತ್ತು ಆಪ್ತ ಬಳಗಕ್ಕೂ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಹಾಗೂ ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲೆಂದು ಶ್ರೀ ಗುರು ಹಾಲೇಶ್ವರರಲ್ಲಿ ಪ್ರಾರ್ಥಿಸುತ್ತೇವೆ...😔📿