ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ರೋಣ ಮತಕ್ಷೇತ್ರದ ಶಾಸಕರು ಶ್ರೀಯುತ ಜಿ.ಎಸ್‌ ಪಾಟೀಲ್‌ ಅವರಿಂದ ಶ್ರೀ ಮಠದ ಯಾತ್ರಿ ನಿವಾಸ ಉದ್ಘಾಟನೆಗೊಂಡಿತು ಹಾಗೂ ಶ್ರೀಮಠದ ವತಿಯಿಂದ ಶ್ರೀಯುತರಿಗೆ ಆಧುನಿಕ ಭಗೀರಥ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಮುಂಡರಗಿ: ತಾಲ್ಲೂಕಿನ ಡೋಣಿ ಗ್ರಾಮದಲ್ಲಿನ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ (ರಿ) ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ  ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ `ಯಾತ್ರಿ ನಿವಾಸ~ ವನ್ನು ಶ್ರೀ ಹಾಲಸ್ವಾಮಿಜೀ ಮಠದ ಹಿರಿಯ ಮತ್ತು ಕಿರಿಯ ಸ್ವಾಮೀಗಳು, ಶ್ರೀ ಗುರು ಹಾಲಸೋಮೇಶ್ವರ ಸ್ವಾಮೀಜಿ ಮತ್ತು ಶ್ರೀ ಅಮೃತೇಶ್ವರ ಸ್ವಾಮಿಜೀ, ಹಾಗೂ ರೋಣ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಶ್ರೀ ಮಠದ ಶಿಷ್ಯ ಬಂದು ಶ್ರೀಯುತ ಜಿ.ಎಸ್‌ ಪಾಟೀಲ್‌ ಅವರಿಂದ ಶ್ರೀ ಮಠದ ಯಾತ್ರಿ ನಿವಾಸ ಉದ್ಘಾಟನೆಗೊಂಡಿತು ಹಾಗೂ ಶ್ರೀಮಠದ ವತಿಯಿಂದ ಶ್ರೀಯುತರಿಗೆ " ಆಧುನಿಕ ಭಗೀರಥ ಪ್ರಶಸ್ತಿ " ನೀಡಿ ಗೌರವಿಸಲಾಯಿತು.                    " ಆಧುನಿಕ ಭಗೀರಥ ಪ್ರಶಸ್ತಿ " 

Doni Halaswamy Jatre Mahotsava-2024 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೪

  ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 25ನೇ ವರ್ಷದ ರಜತ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ  ಆಹ್ವಾನ ಪತ್ರಿಕೆ.                                   ಕಾರ್ಯಕ್ರಮಗಳು ದಿನಾಂಕ: 06-04-2024ನೇ ಶನಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC)  ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.. ದಿನಾಂಕ: 09-04-2024ನೇ ಮಂಗಳವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ  ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ  ಕರ್ತೃುಗದ್ದುಗಿಗೆಮೂರ್ತಿಗೆ  ಮಹಾರುದ್ರಾಭಿಷೇಕ ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಶ್ರೀ ಷ.ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ. ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳು ಗದ್ದುಗೆ ಮಹೋತ್ಸವ ನೆರವೇರುವುದು.  ದಿನಾಂಕ: 10-04-2024ನೇ ಬುಧವಾರದಂದು ಬೆಳಗ್ಗೆ  1...