ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 27ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ, ಸಾಮೂಹಿಕ ವಿವಾಹಗಳು, ದೀಕ್ಷಾ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ.
ದಿನಾಂಕ 10.03.2026ನೇ ಮಂಗಳವಾರರರಂದು ರಾತ್ರಿ 8:00 ಕ್ಕೆ. ಗ್ರಾಮದ ಸಕಲ ಸದ್ಭಕ್ತರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಈ ವರ್ಷದ ಹಾಲಪ್ಪಜ್ಜನ ಜಾತ್ರೆಯ ರಣಗಂಬ ಸ್ಥಾಪಿಸುವ ಮೂಲಕ ವಿದ್ಯುಕ್ತವಾಗಿ ಜಾತ್ರಾ ವಿಧಿ ವಿಧಾನಗಳು ಆರಂಭವಾಗುತ್ತವೆ.
![]() |
ರಣಗಂಬ![]() |
ದಿನಾಂಕ: 17-03-2026ನೇ ಮಂಗಳವಾರದದು ಸಾಯಂಕಾಲ 4-00 ಗಂಟೆಗೆ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ(ksrtc) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.
![]() |
| ತೇರಿನ ಕಳಸದ ಮೆರವಣಿಗೆ |
ದಿನಾಂಕ: 20-03-2026ನೇ ಶುಕ್ರವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃ ಗದ್ದುಗಿಗೆ ಮಹಾರುದ್ರಾಭಿಷೇಕ.
| ಹಾಲೇಶ್ವರರ ಕರ್ತೃ ಗದ್ದುಗಿಗೆ |
ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ,
ಶ್ರೀ ಷ||ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ
ಇವರ ನೇತೃತ್ವದಲ್ಲಿ ಜರುಗುವುದು.
![]() |
ಶ್ರೀ ಷ||ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ ಇವರ ನೇತೃತ್ವದಲ್ಲಿ ಜರುಗ |
11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು.
ದಿನಾಂಕ: 21-03-2026ನೇ
ಶನಿವಾರದಂದು 10-30 ಕ್ಕೆ ಶ್ರೀ ಮಹಾಲಿಂಗನಗೌಡ್ರು ಹಳೇಮನಿ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ,
ಶ್ರೀ ನಾಗಪ್ಪ ಹರ್ತಿ ಇವರ ಮನೆಗೆ ತೇಜಿ ಭಿನ್ನ,( ಶ್ರೀ ಬಿ.ಎಸ್ ಕೆರೆ ವಕೀಲರು ಇವರ ಮನೆಯಿಂದ ರಥೋತ್ಸವಕ್ಕೆ ಹೂವಿನ ಸೇವೆ.) ಸಾಯಂಕಾಲ 5:00 ಗಂಟೆಗೆ ಮಹಾರಥೋತ್ಸವ ಜರಗುವುದು.
ದಿನಾಂಕ: 22-03-2026 ನೇ ರವಿವಾರದಂದು ಸಾಯಂಕಾಲ 6:00 ಗಂಟೆಗೆ ಕಡುಬಿನ ಕಾಳಗ ಜರುಗುವುದು. ನಂತರ ರಾತ್ರಿ 10-30 ಕ್ಕೆ
ಡಾ| ಬಿ. ಆರ್. ಅಂಬೇಡ್ಕರ್ ನಾಟ್ಯ ಸಂಘ ಡೋಣಿ ಇವರಿಂದ "ರೈತ ಹರಿಸಿದ ರಕ್ತದೊಕಳಿ ಅರ್ಥಾತ್ ಗರತಿ ಮೇಲೆ ಕಣ್ಣಿಟ್ಟ ಬಳನಾಯಕರು" ಎಂಬ ಸುಂದರ ನಾಟಕ ಇರುತ್ತದೆ.
ಡೋಣಿ ಹಾಗೂ ಡೋಣಿತಾಂಡ, ಕದಾಂಪುರ, ಚುರ್ಚಿಹಾಳ, ಡಂಬಳ, ಅತ್ತಿಕಟ್ಟಿ, ಯಕ್ಲಾಸಪುರ, ಕೊರ್ಲಹಳ್ಳಿ, ಬೀಡನಾಳ, ಬೂದಿಹಾಳ, ಬೆಣ್ಣಿಹಳ್ಳಿ, ವಿರುಪಾಪುರ, ಮುಷ್ಠಿಕೊಪ್ಪ, ಹಳ್ಳಿಕೇರಿ, ದಿಂಡೂರ, ಬೀಡನಾಳ ತಾಂಡ, ಬಸಾಪುರ, ಶಿಂಗಟಾಲಕೇರಿ ತಾಂಡ, ಪೇಠಾಲೂರು, ಕವಲೂರು, ಗಂಗಾಪೂರ, ಹೊಸಡಂಬಳ, ಶಿಂಗಟಾಲೂರ, ತಿಪ್ಪಾಪುರ. ಹಾಗೂ ಸುತ್ತಮುತ್ತಲಿನ ಗ್ರಾಮದವರಿಂದ. ಈ ಎಲ್ಲ ಕಾರ್ಯಕ್ರಮಗಳು ಡೋಣಿ ಮತ್ತು ಡೋಣಿತಾಂಡಾದ ಸಮಸ್ತ ಸದ್ಭಕ್ತರಿಂದ ಸ್ತ್ರೀ ಶಕ್ತಿ ಸಂಘಗಳು, ಯುವಕ ಮಂಡಳಿಗಳು ಭಜನಾ ಸಂಘಗಳು ಇವರಿಂದ ನೆರವೇರುವುದು.
ದೀಕ್ಷಾ ಅಯ್ಯಾಚಾರಕ್ಕೆ ಸಂಪರ್ಕಿಸಿರಿ :
ಶಿವಯ್ಯ ಕಲ್ಲೂರು ಮಠ : 8861295526
ಕಿರಣಸ್ವಾಮಿ ಗುರಮ್ಮನಮಠ : 8105545109
*ಸಾಮೂಹಿಕ ವಿವಾಹ ನೋಂದಣಿಗಾಗಿ ಸಂಪರ್ಕಿಸಿ*
ಯಮನಪ್ಪ ಈಳಿಗೇರ : 9731960804
ಶರಣಪ್ಪ ಜಂತ್ಲಿ : 9008697905
ಶಂಕರಗೌಡ ಹೊಸಮನಿ : 9740622928
ಮಂಜುನಾಥ್ ತಳವಾರ : 6362476781
ವಿನಾಯಕ ಬೆಳಿ : 9964996434
ಸಲ್ಮಾನ್ ಚಿಕ್ಕೋಪ್ಪ : 8105253190
ರಮೇಶ್ ಗಾಳಪ್ಪನವರ : 7353437419
ವಿ.ಸೂ: ಬಾಲ್ಯ ವಿವಾಹ ಹಾಗೂ ಮರು ವಿವಾಹ ಅವಕಾಶ ಇರುವುದಿಲ್ಲ .
ನೋಂದಣಿಗೆ ಕೊನೆಯ ದಿನಾಂಕ: 10-03-2026
ದಾಸೋಹ ಸೇವೆ ಗ್ರಾಮಗಳು: ಡೋಣಿ ಹಾಗೂ ಡೋಣಿ ತಾಂಡ, ಕದಾಂಪುರ, ಚುರ್ಚಿಹಾಳ, ಹೊಸಡಂಬಳ, ಅತ್ತಿಕಟ್ಟಿ, ಯಕ್ಲಾಸಪುರ, ಕೊರ್ಲಹಳ್ಳಿ, ಬೀಡನಾಳ ಹಾಗೂ ಬೀಡನಾಳ ತಾಂಡ, ಬೂದಿಹಾಳ, ಬೆಣ್ಣಿಹಳ್ಳಿ, ವಿರುಪಾಪುರ, ಮುಸ್ಠಿಕೊಪ್ಪ, ಹಳ್ಳಿಕೇರಿ, ದಿಂಡೂರ, ಬಸಾಪುರ, ತಿಪ್ಪಾಪುರ,
ಹಾಗೂ ಸುತ್ತ ಮುತ್ತಲಿನ ಗ್ರಾಮದವರಿಂದ ಈ ಎಲ್ಲ ಕಾರ್ಯಕ್ರಮಗಳು ಡೋಣಿ ಮತ್ತು ಡೋಣಿತಾಂಡಾದ ಸಮಸ್ತ ಸದ್ಭಕ್ತರಿಂದಹಾಗೂ ಸ್ತ್ರೀಶಕ್ತಿ ಸಂಘಗಳು, ಯುವಕ ಮಂಡಳಿಗಳು ಭಜನಾ ಸಂಘಗಳು ಇವರಿಂದ ನೆರವೇರುವುದು,
ಸ್ವಾಗತ ಕೋರುವವರು: ಶ್ರೀ ಹಾಲೇಶ್ವರ ದೇವಸ್ಥಾನ ಮತ್ತು ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು.
ಹಾಲಸ್ವಾಮಿ ಮಠದ ಭಕ್ತರು
ಡೋಣಿ ಹಾಲಸ್ವಾಮಿಜೀ ಜಾತ್ರೆ ಕಾರ್ಯಕ್ರಮ - 2026
Sri Sadguru Shivayogi Halasomeshwara Maha Swamiji.Doni
ಸಮಸ್ತ ಮನುಕುಲಕ್ಕೆ ಹೊಸ ದಿನ ಹೊಸತನ ತರಲಿ
ಸಿಹಿಯಾದ ಬೆಲ್ಲ ಕಹಿಯಾದ ಬೇವು ಆರೋಗ್ಯ ಇಮ್ಮಡಿಯಾಗಲಿ
ಹೊಸ ಯುಗಾದಿ ಆನಂದ ತರಲಿ.
ನವ ವಸಂತದ(ಯುಗದಿ) ಹಬ್ಬದ ಶುಭಾಶೀರ್ವಾದಗಳು.
.jpg)


















ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ