" ಸರ್ವ ಮಂಗಳ ಮಾಂಗಲ್ಯೇ
ಶಿವೇ ಸರ್ವಾರ್ಥಸಾದಕೆ
ಶರಣು ತ್ರಯಂಬಕೇ ಗೌರಿ
ನಾರಾಯಣಿ ನಮೋಸ್ತುತೆ."
ಗದಗ ಜಿಲ್ಲಾ ಪುಣ್ಯಕ್ಷೇತ್ರ ಡೋಣಿ ಗ್ರಾಮದಲ್ಲಿ
ಶ್ರೀ ಜಗನ್ಮಾತೆ ದುರ್ಗಾದೇವಿಯ ಮತ್ತು ದ್ಯಾಮವ್ವ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ದೇವಸ್ಥಾನ ಉದ್ಘಾಟನೆ ಹಾಗೂ ರಾಜಗೋಪುರದ ಕಳಸಾರೋಹಣ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಭವ್ಯ ಕಾರ್ಯಕ್ರಮದ ದಿವ್ಯ ಅಧ್ಯಕ್ಷತೆಯನ್ನು ಪರಮಪೂಜ್ಯ ಸದ್ಗುರು ಶಿವಯೋಗಿ ಶ್ರೀ ಹಾಲ ಸೋಮೇಶ್ವರ ಮಹಾ ಸ್ವಾಮೀಜಿಯವರು
ಈ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಮರುಳಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು,
(ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ ಅಳವಂಡಿ,ಹೊಳಗುಂದಿ, ಭಾವಿಹಳ್ಳಿ.)
ಪಾವನ ಸಾನಿಧ್ಯವನ್ನು
ಶ್ರೀ ವಿಶ್ವರಾಧ್ಯ
ಹಾಲಸ್ವಾಮಿಗಳವರು ವಹಿಸಿಕೊಂಡಿದ್ದರು.
ಪ್ರಾತಃಕಾಲದಲ್ಲಿ ಗ್ರಾಮದ ಮಧ್ಯೆ ಇರುವ ದೇವಿಯ ನೂತನ ದೇವಾಲಯದಲ್ಲಿ ಹೋಮ ಹವನ ನವಗ್ರಹ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶ್ರೀ ಗುರು ಹಾಲೇಶ್ವರ ಮಠದ ಪಕ್ಕದಲ್ಲಿರುವ ಶ್ರೀದೇವಿಯ ದೇವಸ್ಥಾನದಲ್ಲಿ ನೂತನ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಅತ್ಯಂತ ಸಾಂಗವಾಗಿ ಜರುಗಿದವು.
ಈ ಕಾರ್ಯಕ್ರಮ ಡೋಣಿ ಗ್ರಾಮದ ಸಕಲ ಸದ್ಭಕ್ತರ ಭಕ್ತಿಯ ದ್ಯೋತಕವಾಗಿ ಕಂಡು ಬಂತು. ಡೊಳ್ಳಿನ ಮೇಳಗಳು ದೇವಿಯ ಜೈಕಾರ ಭಕ್ತರ ಭಕ್ತಿಯ ನಾಮದ ಓಂಕಾರ ಹಾಗೂ ಪರಮಪೂಜ್ಯರ ಭವ್ಯ ಮೆರವಣಿಗೆ ಗ್ರಾಮದ ಸಕಲ ಸದ್ಭಕ್ತರೊಂದಿಗೆ ಗ್ರಾಮದ ಮೂಲ ಅಗಸಿಯ ಸ್ಥಳದಿಂದ ಶ್ರೀ ದ್ಯಾಮವ್ವ ದೇವಿಯ ಮತ್ತು ದುರ್ಗಾದೇವಿಯ ಮಹಾಮೂರ್ತಿಗಳ ಮೆರವಣಿಗೆ ಅತ್ಯಂತ ವಿಜ್ರಂಭಣೆಯಿಂದ ಜರಗಿತು. ಶ್ರೀದೇವಿಯ ಕಳಸಾರೋಹಣ ಪವಾಡ ಸದೃಶದಂತೆ ತ್ರಿಮೂರ್ತಿ ಪರಮಪೂಜ್ಯರ ದಿವ್ಯ ಅಮೃತ ಹಸ್ತದಿಂದ ಗ್ರಾಮದ ಸಕಲ ಸದ್ಭಕ್ತರೊಂದಿಗೆ ನಡೆಯಿತು.
ದೇವಿಯನ್ನ ನಂಬಿದರೆ ಜಗನ್ಮಾತೆ ಖಂಡಿತ ಇಂಬು ಕೊಡುತ್ತಾಳೆ. ಅವಳ ಮಹಿಮೆ ಅಪಾರ. ಅಳವಂಡಿಯ ಪರಮಪೂಜ್ಯರು ತಮ್ಮನುಡಿಗಳಲ್ಲಿ ಶ್ರೀ ಗುರು ಹಾಲೇಶ್ವರರು ಭಾಗಳಿ ಗ್ರಾಮದಲ್ಲಿ ಪವಾಡವನ್ನು ತೋರಿಸಿದ ವಿಚಾರವನ್ನು ಜಗನ್ಮಾತೆ ಪ್ರತ್ಯಕ್ಷವಾಗಿ ಮೂಗುತಿ ಕೊಟ್ಟ ಮಹಿಮೆಯನ್ನು ವಿವರಣೆಯಾಗಿ ಮೈಮನ ರೋಮಾಂಚನ ವಾಗುವಂತೆ ತಿಳಿಸಿದರು. ಗ್ರಾಮದ ಸಕಲ ಸದ್ಭಕ್ತರು ಎಲ್ಲರೂ ಒಂದಾಗಿ ಚೆಂದಾಗಿ ಆನಂದದಿಂದ ಎಲ್ಲಾ ದೇವಸ್ಥಾನಗಳ ಹಾಗೂ ಶ್ರೀ ಹಾಲೇಶ್ವರ ಮಠದ ಸೇವೆಯನ್ನ ಮಾಡಬೇಕು ಮತ್ತು ಮುಕ್ತಿಯನ್ನು ಪಡೆಯಬೇಕೆಂದು ತಿಳಿಸಿದರು. ಅನೇಕ ಮಹಾತ್ಮರು ದೇವಿಯ ಸಾಕ್ಷಾತ್ಕಾರವನ್ನು ಪಡೆದುಕೊಂಡಿದ್ದಾರೆ. ಶ್ರೀ ಗುರು ಹಾಲೇಶ್ವರರು. ನವಲಗುಂದ ನಾಗಲಿಂಗಪ್ಪನವರು. ಕೊಡಿಕೊಪ್ಪದ ಹುಚ್ಚ ವೀರೇಶ್ವರರು. ಹೊರಕಡ್ಲಿ ಅಜ್ಜನವರು ಶ್ರೀ ಹಾಲ ಸೋಮೇಶ್ವರ ಮಹಾ ಸ್ವಾಮೀಜಿಯವರು ತಮ್ಮ ಅನುಷ್ಠಾನದಲ್ಲಿ ಜಗನ್ಮಾತೆಯ ದರ್ಶನವನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಗ್ರಾಮದ ಸರ್ವ ಮತದಭಕ್ತರು ನಾವೆಲ್ಲ ಒಂದೇ ಭಾರತಾಂಬೆಯ ಮಕ್ಕಳು ಭೇದ ಭಾವಗಳನ್ನು ಮರೆತು ಭಾರತೀಯ ಸಂಸ್ಕೃತಿಯನ್ನು ಬೆಳೆಸಬೇಕು ಉಳಿಸಬೇಕು ಪುನರುಜ್ಜೀವನಗೊಳಿಸಬೇಕು ಎಂದು ಮಾರಿಮಿಕವಾಗಿ ತಿಳಿಸಿದರು.
ಪರಮಪೂಜ್ಯರಿಗೆ ಹಾಗೂ ಸೇವಾ ಸಲ್ಲಿಸಿದ ಸದ್ಭಕ್ತರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಗ್ರಾಮದ ಗುರು ಹಿರಿಯರ ಯುವಕರ ಮಕ್ಕಳ ತಾಯಂದಿರ ಸೇವೆ ನೋಡಿ ಆನಂದ ಪಡುವಂತ ಅತ್ಯಂತ ಸುಂದರ ಉತ್ಸವ ಸಾಂಗಮಂಗಲವಾಗಿ ಮಂಗಲ ಗೊಂಡಿತು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ