ವಿಷಯಕ್ಕೆ ಹೋಗಿ

Doni Halaswamy Jatre 2022

 ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 23ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ.

ಕಾರ್ಯಕ್ರಮಗಳು

ದಿನಾಂಕ: 23-03-2022ನೇ ಬುಧವಾರ ಬೆಳಿಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು.

ದಿನಾಂಕ: 24/03/2022 ಗುರುವಾರ ರಂದು ಅಶೋಕ್ ಆಸ್ಪತ್ರೆ ವತಿಯಿಂದ ಶ್ರೀ ಹಾಲೇಶ್ವರ ದೇವಸ್ಥಾನದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ.

ದಿನಾಂಕ: 30-03-2022ನೇ ಬುಧವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು..

ದಿನಾಂಕ: 01-04-2022ನೇ ಶುಕ್ರವಾರದಂದು ಸಾಯಂಕಾಲ 4-00 ಗಂಟೆಗೆ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿ ಮನಿ ಹಿರೇಮಠ,ಅಳವಂಡಿ ಇವರ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮಗಳು.

ದಿನಾಂಕ: 02-04-222ನೇ ಶನಿವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀಹಾಲಶಂಕರ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಉದ್ಘಾಟನಾ ಸಮಾರಂಭ. ಬೆಳಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ತದನಂತರ 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳು ಗದ್ದುಗೆ ಮಹೋತ್ಸವ ನೆರವೇರುವುದು. 

ದಿನಾಂಕ: 03-04-2022ನೇ ರವಿವಾರದಂದು ಬೆಳಗ್ಗೆ 10-30 ಕ್ಕೆ ಶ್ರೀ ಮಹಾಲಿಂಗನಗೌಡರ ಹಳೆಮನೆ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ, ಶ್ರೀ ನಾಗಪ್ಪ ಹರ್ತಿ ಇವರ ಮನೆಗೆ ತೇಜಿ ಭಿನ್ನ ಸಾಯಂಕಾಲ 4-00 ಗಂಟೆಗೆ ಮಹಾರಥೋತ್ಸವ ಜರಗುವುದು
 ಮತ್ತು 6-00 ಗಂಟೆಗೆ  ಹಾಗೂ ರಾತ್ರಿ 8-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು 

ದಿನಾಂಕ: 04-04-2022 ನೇ ಸೋಮವಾರದಂದು ಸಾಯಂಕಾಲ 6:00 ಗಂಟೆಗೆ ಕಡುಬಿನ ಕಾಳಗ ಜರುಗುವುದು.

ಈ ಎಲ್ಲ ಕಾರ್ಯಕ್ರಮಗಳು ಡೋಣಿ ಮತ್ತು ಡೋಣಿತಾಂಡಾದ ಸಮಸ್ತ ಸದ್ಭಕ್ತರಿಂದ


ಹಾಗೂ ಶ್ರೀ ಶಕ್ತಿ ಸಂಘಗಳು, ಯುವಕ ಮಂಡಳಿಗಳು ಭಜನಾ ಸಂಘಗಳು ಇವರಿಂದ ನೆರವೇರುವುದು, 
ಸ್ವಾಗತ ಕೋರುವವರು ಶ್ರೀ ಹಾಲೇಶ್ವರ ದೇವಸ್ಥಾನ ಮತ್ತು ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು.

*ಸಾಮೂಹಿಕ ವಿವಾಹ ನೋಂದಣಿಗಾಗಿ ಸಂಪರ್ಕಿಸಿ*
ಶರಣಪ್ಪ ಜತ್ಲಿ : 9008697905 
ಎಸ್.ಎಚ್.ಸಂದಿಗೌಡ್ರು : 7026181982
ಅಶೋಕ ಹೊಸಪೇಟೆ : 8197502558
ವಿನಾಯಕ ಬೆಳ್ಳಿ : 9731530273
ಮಂಜುನಾಥ ತಳವಾರ್ : 6362476781
ಶಂಕರಗೌಡ ಹೊಸಮನಿ:9740622928 
ಸಲ್ಮಾನ್ ಚಿಕ್ಕೋಪ್ಪ: 8105253190
ರಮೇಶ್ ಗಾಳಪ್ಪನವರ : 7353437419
ರವಿ ಈಳಿಗೇರೆ: 9845308808
ಕಾಸೀಮ್ ಕಾಗದಗಾರ:6361785061
ಲಕ್ಷ್ಮಣ,ಕೆ.ತಳವಾರ : 8970318372

* ದಾಸೋಹ ಸೇವಾ ಗ್ರಾಮಗಳು *
ಡೋಣಿ,ಡೋಣಿತಾಂಡಾ,ದಿಂಡೂರು,ಕದಾಂಪೂರ,ಚುರ್ಚಹಾಳ,ಬೂದಿಹಾಳ,ಕೂರ್ಲಹಳ್ಳಿ,ಬೀಡನಾಳ,ಮುಷ್ಠಿಕೊಪ್ಪ,ಬಸಾಪೂರ,ವಿರುಪಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳು.

ಕುರ್ಲಹಳ್ಳಿ ಗ್ರಾಮಸ್ಥರು

ಬಸಾಪೂರ ಗ್ರಾಮಸ್ಥರು 
ಬೀಡನಾಳ ಗ್ರಾಮಸ್ಥರು

ಮುಷ್ಠಿಕೊಪ್ಪ ಗ್ರಾಮಸ್ಥರು

ಬೂದಿಹಾಳ ಗ್ರಾಮಸ್ಥರು
ಗದಗ ಜಿಲ್ಲಾ, ಮುಂಡರಗಿ ತಾಲೂಕು  ಡೋಣಿ ಗ್ರಾಮದಲ್ಲಿ
ಈ ವರ್ಷದ ಹಾಲಪ್ಪಜ್ಜನ ಜಾತ್ರೆಯ
ರಣಗಂಭ ಸ್ಥಾಪಿಸುವ ಮೂಲಕ ವಿಧ್ಯುಕ್ತವಾಗಿ ಜಾತ್ರಾ ವಿಧಿವಿಧಾನಗಳು ಆರಂಭವಾಗುತ್ತವೆ.

ದಿನಾಂಕ: 23-03-2022 ನೇ ರಾತ್ರಿ 8:00 ಗಂಟೆಗೆ ಪೂಜಾ ಕಾರ್ಯಕ್ರಮ ಗ್ರಾಮದ ಸಕಲ ಸದ್ಭಕ್ತರಿಂದ ನೆರವೇರುತ್ತದೆ. 💐 

ಹಾಲಸ್ವಾಮಿ ಮಠದ ಭಕ್ತರು  

 ಡೋಣಿ ಹಾಲಸ್ವಾಮಿಜೀ ಜಾತ್ರೆ ಕಾರ್ಯಕ್ರಮ - 2022  

Sri Sadguru Shivayogi Halasomeshwara Maha Swamiji.Doni




ಸಮಸ್ತ ಮನುಕುಲಕ್ಕೆ
ಹೊಸ ದಿನ ಹೊಸತನ ತರಲಿ
ಸಿಹಿಯಾದ ಬೆಲ್ಲ ಕಹಿಯಾದ ಬೇವು ಆರೋಗ್ಯ ಇಮ್ಮಡಿಯಾಗಲಿ ಹೊಸ ಯುಗಾದಿ ಆನಂದ ತರಲಿ.
ನವ ವಸಂತದ(ಯುಗದಿ) ಹಬ್ಬದ ಶುಭಾಶೀರ್ವಾದಗಳು. 

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ 

ಹಾಲಸ್ವಾಮಿ ಮಠದ ಭಕ್ತರು 

Halaswamy Math

ಶ್ರೀ ಹಾಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಉಚಿತ ಕಣ್ಣು  ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ 356 ಜನ ತಪಾಸಣೆ ಮಾಡಿ 82 ಜನರನ್ನು  ಕಣ್ಣು  ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಗ್ರಾಮದ ಹಿರಿಯರಿಗೆ ಶುಭಾರ್ಶಿವಾದಗಳು 

ಡೋಣಿ ಗ್ರಾಮದಲ್ಲಿ ಜನಪದ ಸಂಭ್ರಮ
ಚಕ್ಕಡಿ ಓಡಿಸುವ ಮುಖಾಂತರ ಸ್ಪರ್ಧ ಉದ್ಘಾಟನೆ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀಗುರು ಹಾಲಸ್ವಾಮಿಗಳ ಡೋಣಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ2026: ಭಕ್ತಿಯ ಪರಾಕಾಷ್ಠೆ, ಒಗ್ಗಟ್ಟಿನ ಸಂಕಲ್ಪಗ್ರಾಮದಲ್ಲಿ ಮೊಳಗಿದ ಸಡಗರದ ಕಹಳೆ.

ಶ್ರೀ ಗುರು ಹಾಲಸ್ವಾಮಿಗಳ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ: ಭಕ್ತಿಯ ಪರಾಕಾಷ್ಠೆ, ಒಗ್ಗಟ್ಟಿನ ಸಂಕಲ್ಪ ಗ್ರಾಮದಲ್ಲಿ ಮೊಳಗಿದ ಸಡಗರದ ಕಹಳೆ ಪವಿತ್ರ ಪುಣ್ಯಕ್ಷೇತ್ರದ ಆರಾಧ್ಯ ದೈವವಾದ ಶ್ರೀ ಗುರು ಹಾಲಸ್ವಾಮಿಗಳ ವಾರ್ಷಿಕ ಜಾತ್ರಾ ಮಹೋತ್ಸವದ-2026, ನಿಮಿತ್ತ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ನಡೆದ ಈ ಸಭೆಯು ಗ್ರಾಮಸ್ಥರ ಒಗ್ಗಟ್ಟು ಹಾಗೂ ಶ್ರದ್ಧೆಗೆ ಸಾಕ್ಷಿಯಾಯಿತು. ಹಿರಿಯರ ಮಾರ್ಗದರ್ಶನ - ಭಕ್ತರ ಸಂಕಲ್ಪ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮದ ಹಿರಿಯರು ಅತ್ಯಂತ ಉತ್ಸಾಹದಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. "ಗುರುಗಳ ಸೇವೆ ನಮ್ಮ ಭಾಗ್ಯ, ಈ ಬಾರಿಯ ಜಾತ್ರೆಯು ಇಡೀ ನಾಡೇ ಮೆಚ್ಚುವಂತೆ ನಡೆಯಬೇಕು" ಎಂದು ಆಶಿಸಿದರು. ವಿಶೇಷವಾಗಿ, ಯುವಕರು ಮತ್ತು ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ "ಹೆಗಲಿಗೆ ಹೆಗಲು ಕೊಟ್ಟು" ಕಾರ್ಯನಿರ್ವಹಿಸಲು ಸನ್ನದ್ಧರಾದರು. " ಶ್ರೀ ಗುರು ಹಾಲಪ್ಪಜ್ಜನ ಈ ಬಾರಿಯ ಉತ್ಸವದಲ್ಲಿ ಯಾವುದೇ ಕುಂದು-ಕೊರತೆಗಳು ಬಾರದಂತೆ ನಾವು ನೋಡಿಕೊಳ್ಳುತ್ತೇವೆ. ಇದು ಕೇವಲ ಸಭೆಯಲ್ಲ, ಇದು ನಮ್ಮ ಭಕ್ತಿಯ ಸಂಕಲ್ಪ" ಎಂದು ಹಿರಿಯರು ಭಾವಪೂರ್ಣವಾಗಿ ನುಡಿದರು. ಶಿಸ್ತುಬದ್ಧ ಆಯೋಜನೆ ಜಾತ್ರೆಯ ಪ್ರತಿಯೊಂದು ಹಂತದಲ್ಲೂ ಅಚ್ಚುಕಟ್ಟುತನ ಕಾಯ್ದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ರಥೋತ್ಸವದ ಸಿದ್ಧತೆ: ಅಲಂಕಾರ...

​🚩 ಡೋಣಿ ಗ್ರಾಮದ ಶ್ರೀಗುರು ಹಾಲೇಶನ ರಣಗಂಬ: ಭಕ್ತಿ ಭಾವದ ವೈಭವದ ಸಂಗಮ 🚩​

​🚩 ಶ್ರೀ ಗುರು ಹಾಲೇಶನ ರಣಗಂಬ: ಭಕ್ತಿ ಭಾವದ ವೈಭವದ ಸಂಗಮ 🚩 ​ಇಂದು ನಮ್ಮ ಗ್ರಾಮದಲ್ಲಿ ಶ್ರೀ ಗುರು ಹಾಲೇಶನ ರಣಗಂಬ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಹಾಗೂ ಅತ್ಯಂತ ಅಚ್ಚುಕಟ್ಟಾಗಿ ನೆರವೇರಿತು. ಭಕ್ತಿ ಮತ್ತು ಪರಂಪರೆಯ ಈ ಸಮಾಗಮಕ್ಕೆ ಗ್ರಾಮದ ಸಮಸ್ತ ಭಕ್ತವೃಂದ ಸಾಕ್ಷಿಯಾಯಿತು. ​🥁 ಸಾಂಸ್ಕೃತಿಕ ಮೆರುಗು ​ಕಾರ್ಯಕ್ರಮಕ್ಕೆ ಕಳೆ ತಂದಿದ್ದು ಅಬ್ಬರದ ಡ್ರಮ್ ಸೆಟ್ ಮೇಳ ಮತ್ತು ನಾಡಿನ ಸಂಸ್ಕೃತಿಯ ಪ್ರತೀಕವಾದ ಡೊಳ್ಳಿನ ಮೇಳ . ತಾಳ-ಲಯಗಳ ಈ ಜುಗಲ್‌ಬಂದಿ ನೆರೆದಿದ್ದವರಲ್ಲಿ ಹೊಸ ಚೈತನ್ಯ ತುಂಬಿತು. ಇನ್ನು ಸೋಗಲದ ಆರತಿಯನ್ನು ಹಿಡಿದು ಶಿಸ್ತಿನಿಂದ ಸಾಗುತ್ತಿದ್ದ ತಾಯಂದಿರ ಪಾದಯಾತ್ರೆ ಮತ್ತು ಅವರ ಭಕ್ತಿಭಾವ ಕಾರ್ಯಕ್ರಮಕ್ಕೆ ದೈವಿಕ ಮೆರುಗನ್ನು ನೀಡಿತು. ​✨ ಪೂಜ್ಯರ ದಿವ್ಯ ಸನ್ನಿಧಿ ​ಶ್ರೀಮಠದ ಹಿರಿಯ ಪೂಜ್ಯರಾದ ಶ್ರೀ ಗುರು ಹಾಲ ಸೋಮೇಶ್ವರ ಹಾಲ ಸ್ವಾಮಿಗಳ ಆಶೀರ್ವಾದ, ಕಿರಿಯ ಪೂಜ್ಯರಾದ ಶ್ರೀ ಅಮೃತೇಶ್ವರ ಶ್ರೀಗಳ ಮಾರ್ಗದರ್ಶನ ಹಾಗೂ ಮೌನ ಋಷಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ಬಹಳ ಶ್ರದ್ಧ...

ಹಾಲಪ್ಪಜ್ಜನ ಪವಾಡ!ಕಳಸವು ರಥದತ್ತ ಸಾಗುತ್ತಿರುವಾಗ ಅನಿರೀಕ್ಷಿತವಾಗಿ ಸುರಿದ ಮಳೆರಾಯನ ಕೃಪಾಶೀರ್ವಾದ ಇಡೀ ಗ್ರಾಮವನ್ನೇ ಮಡಿಯಾಗಿಸಿತು.

ಶ್ರೀಗುರು ಹಾಲೇಶನ ರಥದ ಕಳಸಾರೋಹಣ:  ಭಕ್ತಿ-ಭಾವದ ಮಳೆಯಲ್ಲಿ ಮಿಂದೆದ್ದ ಡೋಣಿ ಗ್ರಾಮ ಡೋಣಿ ಗ್ರಾಮ: ಆಧ್ಯಾತ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ಸಂಗಮಕ್ಕೆ ಸಾಕ್ಷಿಯಾದ ಡೋಣಿ ಗ್ರಾಮದಲ್ಲಿ, ಶ್ರೀಗುರು ಹಾಲಪ್ಪಜ್ಜನ ರಥದ ಕಳಸಾರೋಹಣ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನೆರವೇರಿತು. ಭಕ್ತರ ಸಾಗರ, ಮಂಗಳವಾದ್ಯಗಳ ನಿನಾದ ಮತ್ತು ಮಳೆರಾಯನ ಆಶೀರ್ವಾದದ ನಡುವೆ ಈ ದಿವ್ಯ ಕಾರ್ಯಕ್ರಮವು ಗ್ರಾಮದ ಇತಿಹಾಸದಲ್ಲಿ ಒಂದು ಸ್ಮರಣೀಯ ಪವಾಡದಂತೆ ಭಾಸವಾಯಿತು. ನೂತನ ಗೃಹದಿಂದ ಭಕ್ತಿಯ ಪಯಣ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ್ (KSRTC) ಅವರ ನೂತನ ನಿವಾಸದಿಂದ ಈ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹೊಸ ಮನೆಯ ಸಡಗರದೊಂದಿಗೆ, ಮನೆಯಿಂದ ಪ್ರಥಮ ಬಾರಿಗೆ ಪವಿತ್ರ ಕಳಸವನ್ನು ತರುವ ಮೂಲಕ ತಳವಾರ್ ಕುಟುಂಬವು ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಿತು. ವೈಭವದ ಮೆರವಣಿಗೆ ಮತ್ತು ಸಾಂಸ್ಕೃತಿಕ ನಿನಾದ ಮೆರವಣಿಗೆಯ ಉದ್ದಕ್ಕೂ ಡೊಳ್ಳು ಮತ್ತು ಡ್ರಮ್ ಸೆಟ್ ಮೇಳಗಳ ಗಂಭೀರ ನಿನಾದ ಮುಗಿಲು ಮುಟ್ಟಿತ್ತು. ಮುತ್ತೈದೆಯರು ಮಂಗಳಾರತಿಯನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದರೆ, ಇಡೀ ವಾತಾವರಣವು ಮಂಗಳಮಯವಾಗಿತ್ತು. ಭಕ್ತಿಯ ಹೊರೆ: ಶ್ರೀ ಯಲ್ಲಪ್ಪ ತಳವಾರ್ ಅವರ ಕಿರಿಯ ಪುತ್ರರಾದ ಮಂಜುನಾಥ್ ತಳವಾರ್ ಅವರು ಶ್ರೀ ಗುರು ಹಾಲೇಶನ ರಥದ ಕಳಸವನ್ನು ಅತ್ಯಂತ ಭಕ್ತಿಪೂರ್ವಕವಾಗಿ ತಮ್...