ವಿಷಯಕ್ಕೆ ಹೋಗಿ

ಶ್ರೀಮಠದ ಆತ್ಮೀಯ ಶಿಷ್ಯರು ಗ್ರಾಮದ ಕಳಶಪ್ರಾಯರಾದ ಶ್ರೀ ಬಸವನಗೌಡ ವಿ ಪಾಟೀಲ ಅವರ ಶಿವಗಣಾರಾಧನೆ.

ಶಿವಗಣಾರಾಧನೆ 
29-6-2021 ಮಂಗಳವಾರ

ಸಜ್ಜನರು ಸಾತ್ವಿಕರು ಸರಳ ಸಹಕಾರ ಮೂರ್ತಿಗಳು ಶ್ರೀಮಠದ ಆತ್ಮೀಯ ಶಿಷ್ಯರು ಗ್ರಾಮದ ಕಳಶಪ್ರಾಯರಾದ ಶ್ರೀ ಬಸವನಗೌಡ ವಿ ಪಾಟೀಲ ಅವರ ಅಗಲಿಕೆ ಶ್ರೀಮಠದ ಬಲವೇ ಕುಂದಿದಂತಾಗಿ ಗ್ರಾಮದ ಕಳಶ ಕಳಚಿದಂತಾಗಿದೆ ತಮ್ಮ ಇಡೀ ಜೀವಮಾನವನ್ನು ಜನರ ಹಿತಕ್ಕಾಗಿ ಶ್ರಮಿಸಿದವರು ಕಷ್ಟವೆಂದವರ ಪಾಲಿಗೆ ಪರಿಹಾರದ ಪ್ರತಿರೂಪವಾಗಿ ನಡತೆಯಲ್ಲಿ ನಯವಂತಿಕೆಯಿಂದ ನುಡಿಯಲ್ಲಿ ಸತ್ಯವಂತಿಕೆಯಿಂದ ಮೊಗದಲ್ಲಿ ನಗು ತುಂಬಿದ ದೈವಂ ತಿಕೆ ಕಳೆಯಿಂದ ಕೊಡಿ ಆದರ್ಶಮಯ ಜೀವನ ಸಾಗಿಸಿದ್ದೀರಿ ತಮ್ಮ ಇಡೀ ಮನೆತನವು ಹಸಿದವರಿಗೆ ಅನ್ನ ನೀಡುವ ದಾಸೋಹ ಕೇಂದ್ರವಾಗಿ ಸಾಧು-ಸಂತರ ಮತ್ತು ಮಠಮಾನ್ಯಗಳ ಪಾಲಿಗೆ ಆಸ್ತಿಯಾಗಿ ಬದುಕಿದಂತ ವ್ಯಕ್ತಿತ್ವ ನಿಮ್ಮದು ಅಂತಹ ವ್ಯಕ್ತಿ ಇಲ್ಲವೆಂಬುದನ್ನು ನಮಗೆಲ್ಲಾ ನೋವುಂಟು ಮಾಡಿದೆ ಶ್ರೀ ಮಠದ ಪರಂಪರೆಯ ಉದ್ದಕ್ಕೂ ಭಕ್ತ ಮಹಾಶಯರ ಪಂತಿಯಲ್ಲಿ ಮೊದಲ  ಸ್ಮರಣೆಯಾಗಿ ಇರುವಿರಿ ನಿಮ್ಮಂತ ಶ್ರೇಷ್ಠ ಶಿಷ್ಯರನ್ನು ಪಡೆದ ಶ್ರೀಮಠವು ಹೆಮ್ಮೆ ಪಡುತ್ತದೆ ತಮ್ಮ ಆತ್ಮಕ್ಕೆ ಶ್ರೀ ಗುರು ಹಾಲೇಶ್ವರರು ಮುಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ ಓಂ ಶಾಂತಿ ಶಾಂತಿ ಶಾಂತಿಃ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ"

 ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  "ಪೂರ್ವ ಸಿದ್ಧತಾ ಸಭೆ" ಶ್ರೀಮಠದ ಭಕ್ತಾಭಿಮಾನಿಗಳೇ, ದಿ,30/03/2025 ನೇ ರವಿವಾರ ರಿಂದ , ದಿ,1,042025 ನೇ ಮಂಗಳವಾರ ನಡೆಯುವ ಶ್ರೀ ಗುರು ಹಾಲಸೋಮೇಶ್ವರ  ಸಾನಿಧ್ಯದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಮತ್ತು ಶ್ರೀ ಮಠದ ಸಮಸ್ತ ಸದ್ಭಕ್ತರ ಸೇವೆ ಸಹಕಾರದೊಂದಿಗೆ ಪ್ರತಿ ವರ್ಷದ ಪದ್ದತಿಯಂತೆ ಶ್ರೀ ಗುರು ಹಾಲಸ್ವಾಮಿ ಮಠದ ಪರಂಪರೆಯ ಜಾತ್ರೋತ್ಸವ ,ಧರ್ಮ ಜಾಗೃತಿ ಸಮಾರಂಭನಡೆಸಬೇಕೆನ್ನುವ ವಿಚಾರವನ್ನು ಈಗಾಗಲೇ ಯುಗಾದಿ ಪಾಂಡ್ಯ ಅಮವಾಸ್ಯೆ ಶುಭದಿನ ಎಲ್ಲಾ ಸದ್ಭಕ್ತರಿಗೆ ತಿಳಿಸಿದಂತೆ ದಿನಾಂಕ ಮತ್ತು ಸಮಾರಂಭ ಪತ್ರಿಕೆ ತಯಾರಿಸಲಾಗಿದೆ. ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಮಸ್ತ ಸದ್ಭಕ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ, ಕಾರ್ಯಕ್ರಮದ ಸಲಹೆ ಸೂಚನೆಗಳನ್ನು ನೀಡಬೇಕೆಂದು ಈ ಮೂಲಕ ಉಭಯ ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ತಿಳಿಸುತ್ತಿದ್ದೆವೆ. ಸಭೆಯ ದಿನಾಂಕ: 20.02-2025ನೇ   ಮತ್ತು 21-02-2925 ಸಮಯ: ಸಂಜೆ 5:10  ಸ್ಥಳ:- ಹಾಲೇಶ್ವರ ದೇವಸ್ಥಾನ  ಇಂತಿ ತಮ್ಮ ವಿಶ್ವಾಸಿ ಶ್ರೀ ಹಾಲೇಶ್ವರ ಭಜನಾ ಸಂಘ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ

Doni Halaswamy Jatre Mahotsava-2025 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೫

ಜಾತ್ರಾ  ಕಾರ್ಯಕ್ರಮದ ಆಹ್ವಾನ ಪತ್ರಿಕೆ ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ, ಸಾಮೂಹಿಕ ವಿವಾಹಗಳು, ದೀಕ್ಷಾ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ. ದಿನಾಂಕ 20.03.2025ನೇ ಗುರುವಾರರಂದು ರಾತ್ರಿ 8:00 ಕ. ಗ್ರಾಮದ ಸಕಲ ಸದ್ಭಕ್ತರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಈ ವರ್ಷದ ಹಾಲಪ್ಪಜ್ಜನ ಜಾತ್ರೆಯ ರಣಗಂಬ ಸ್ಥಾಪಿಸುವ ಮೂಲಕ ವಿದ್ಯುಕ್ತವಾಗಿ ಜಾತ್ರಾ ವಿಧಿ ವಿಧಾನಗಳು ಆರಂಭವಾಗುತ್ತವೆ. ರಣಗಂಬ  ದಿನಾಂಕ: 27-03-2025ನೇ ಗುರುವಾರರಂದು ಸಾಯಂಕಾಲ 4-00 ಗಂಟೆಗೆ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ(ksrtc) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು. ದಿನಾಂಕ: 30-03-2025ನೇ ರವಿವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃ ಗದ್ದುಗಿಗೆ ಮಹಾರುದ್ರಾಭಿಷೇಕ.  ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ  ಹಾಗೂ ಅಯ್ಯಾಚಾರ ಕಾರ್ಯಕ್ರಮ,  ಶ್ರೀ ಷ||ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ  ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳುಗದ್ದುಗೆ ಮಹೋತ್ಸವ ನೆರವೇರ...

Doni Halaswamy Jatre Mahotsava-2024 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೪

  ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 25ನೇ ವರ್ಷದ ರಜತ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ  ಆಹ್ವಾನ ಪತ್ರಿಕೆ.                                   ಕಾರ್ಯಕ್ರಮಗಳು ದಿನಾಂಕ: 06-04-2024ನೇ ಶನಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC)  ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.. ದಿನಾಂಕ: 09-04-2024ನೇ ಮಂಗಳವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ  ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ  ಕರ್ತೃುಗದ್ದುಗಿಗೆಮೂರ್ತಿಗೆ  ಮಹಾರುದ್ರಾಭಿಷೇಕ ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಶ್ರೀ ಷ.ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ. ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳು ಗದ್ದುಗೆ ಮಹೋತ್ಸವ ನೆರವೇರುವುದು.  ದಿನಾಂಕ: 10-04-2024ನೇ ಬುಧವಾರದಂದು ಬೆಳಗ್ಗೆ  1...