ಜಗತ್ತಿನ ತಂತ್ರಜ್ಞಾನದ ವೇಗ ರೆಪ್ಪೆ ಮಿಟುಕಿಸಿ ಕಣ್ಣು ಬಿಡುವಷ್ಟರಲ್ಲಿ ಇದ್ದದ್ದನ್ನು ಇಲ್ಲವಾಗಿಸಿ ಇಲ್ಲದ್ದನ್ನು ಇರುವಂತೆ ಸೃಷ್ಟಿಸುವ ಮಾನವ ಬುದ್ಧಿಶಕ್ತಿಗೆ ದೇವನ ಬೆರಗಾಗಬಲ್ಲ ಮಾನವ ತನ್ನಂತೆ ಹೋಲುವ ಯಂತ್ರದ ಮನುಷ್ಯನ ಕಂಡುಹಿಡಿದ ಗಾಳಿಯಲ್ಲಿ ಪಕ್ಷಿಯಂತೆ ಹಾರಾಡಿದ ನೀರಿನಲ್ಲಿ ಮೀನಿನಂತೆ ಈಜಿದ ವಿಶ್ವದ ಮೂಲೆ ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕಿಸ ಬಲ್ಲ ಸಾಧನ ಕಂಡುಹಿಡಿದ ಅದು ಸಾಲದೆ ಅನ್ಯಗ್ರಹಕ್ಕೂ ಹೋಗಿ ಬರುತ್ತಿದ್ದಾನೆ ಏನೆಲ್ಲವನ್ನು ಸಾಧಿಸಿದ ಮಾನವ ಮಾತ್ರ ಮಾನವಾನಗಿ ಉಳಿದಿಲ್ಲ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶಮಾಡಿದ ಸಂಸ್ಕೃತಿಯನ್ನು ಹದಗೆಡಿಸಿದ ಬಳಸಬೇಕಾದ ವಸ್ತುವನ್ನು ಪ್ರೀತಿಸಿದ ಪ್ರೀತಿಸ ಬೇಕಾದ ವಸ್ತುವನ್ನು ಬಳಸಿದ ಕೊನೆಗೆ ಮನುಷ್ಯ ಮನುಷ್ಯನನ್ನು ಕೊಂದು ಬದುಕುತ್ತಿದ್ದಾನೆ ಸಿರಿ, ಸಂಪತ್ತು ,ಅಧಿಕಾರ, ಆಳ್ವಿಕೆ ಎಲ್ಲವೂ ತನಗೆ ಸೇರಬೇಕೆಂಬ ದುರಾಸೆತನ. ಅದೇ ಹಾದಿಯಲ್ಲಿ ಚೀನಾವು ಸಾಗುತ್ತಿದೆ ವಿಶ್ವವೇ ತನ್ನ ಹಿಡಿತದಲ್ಲಿರಬೇಕು ತನ್ನಲ್ಲಿ ಸಹಾಯಕ್ಕಾಗಿ ಅಂಗಲಾಚಿ ನಿಲ್ಲಬೇಕೆಂಬ ದುಷ್ಟ ಬುದ್ಧಿಯಿಂದ ವಿಶ್ವದ ತುಂಬೆಲ್ಲಾ ಜೈವಿಕ ಯುದ್ಧವನ್ನು ಸಾರಿದೆ ತಾನೇ ನಿರ್ಮಿಸಿದ ಕೋವಿಡ್ 19 ವೈರಾಣುವನ್ನು ಎಲ್ಲೆಡೆ ಪಸರಿಸಿದ ಪರಿಣಾಮ ಇಡೀ ವಿಶ್ವವೇ ತಲ್ಲಣಿಸಿದೆ ದೇಹ ದೌರ್ಬಲ್ಯ ಗೊಂಡರೆ ದೇಶ ತನ್ನಿಂದ ತಾನೇ ದುರ್ಬಲಗೊಳ್ಳುತ್ತದೆ ಎಂಬ ದೂರಲೋಚನೆಯಿಂದ ಮನುಕುಲಕ್ಕೆ ದ್ರೋಹ ಬಗೆಯುವ ಪಾಪಕೃತ್ಯಕ್ಕೆ ಕೈಹಾಕಿದೆ ಇದರ ಪರಿಣಾಮ ಲೆಕ್ಕವಿಲ್ಲದಷ್ಟು ಜೀವಿಗಳು ಮರಣ
ಹೊಂದುತ್ತಿವೆ ಅನೇಕರು ತಂದೆತಾಯಿಗಳನ್ನು,ಆತ್ಮೀಯರನ್ನು ಸಂಬಂಧಿಕರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ ಇವರೆಲ್ಲರ ಶಾಪ ಚೀನಾವನ್ನು ಸುಮ್ಮನೆ ಬಿಡದು. ಭಾರತಕ್ಕೆ ವೈರಾಣು ದೊಡ್ಡದು ಅಲ್ಲದೇ ಇದ್ದರೂ ಜನರು ಸಾಯುವ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲಿದೆ ಹಾಗಂತ ಕರೋನಾ ಬಲಿಷ್ಠವಾಗಿದೆ ಅರ್ಥವೆಂದಲ ಆದರೆ ಅದಕ್ಕೆ ಸಿಕ್ಕ ಬಾರಿ ಪ್ರಚಾರ ಮಾತ್ರ ಎಲ್ಲರ ನಿದ್ದೆಗೆಡಿಸಿದೆ ಘೋರವಾದ ಭಯ ಎಲ್ಲರ ಮನದಾಳದಲ್ಲಿ ಬೇರೂರಿದೆ ಟಿವಿ ಮಾಧ್ಯಮಗಳು ತಮ್ಮ ಚಾನೆಲ್ಗಳ ಟಿಆರ್ ಪಿ( TRP)ಹೆಚ್ಚಿಸಲು ಇಲ್ಲಸಲ್ಲದ ಕಥ ಕಟ್ಟಿ ಭಯದ ವಾತಾವರಣ ನಿರ್ಮಿಸಿದೆ ಇವರು ಬಿತ್ತರಿಸುವ ವಿಷಯಗಳನ್ನು ಸತ್ಯವೆಂದು ನಂಬಿದ ಪರಿಣಾಮ ಕೂತರು ನಿಂತರು ಮಲಗಿದರು ನಿದ್ರಿಸಲು ಬಿಡದ ಕರೊನಾ ಆವರಿಸಿಕೊಂಡಿದೆ ಈ ಪಿಡುಗನ್ನು ಮನಸ್ಸಿನಿಂದ ಓಡಿಸಿದಾಗ ಮಾತ್ರ ಕರೊನಾದಿಂದ ವಿಜಯ ಸಾಧಿಸಲು ಸಾಧ್ಯ ಔಷಧಿಗಳು ರೋಗವನ್ನು ನಿವಾರಿಸಬಹುದು ಆದರೆ ಭಯ ಬದುಕನ್ನೇ ನುಂಗಿ ಬಿಡಬಹುದು ಮನುಷ್ಯ ಪ್ರಕೃತಿದತ್ತವಾದ ಜೀವನವನ್ನು ರೂಢಿಸಿಕೊಂಡಾಗ ಮಾತ್ರ ಯಾವುದೇ ರೋಗಾಣುಗಳ ಭಯವಿಲ್ಲದೆ ಬದುಕಬಹುದು ಅಂತಹ ಶಕ್ತಿ ಪ್ರಕೃತಿ ತನ್ನ ಒಡಲೊಳಗೆ ಹುದುಗಿಸಿಕೊಂಡಿದೆ ಆದರೆ ಮನುಷ್ಯ ಮಾತ್ರ ಅಭಿವೃದ್ಧಿಯ ನೆಪದಲ್ಲಿ ಪರಿಸರವನ್ನು ನಾಶ ಮಾಡುತ್ತಾ ಮುಗಿಲೆತ್ತರಕ್ಕೆ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾನೆ ಹೆದ್ದಾರಿಗಳ ನಿರ್ಮಾಣಕ್ಕಾಗಿ ಲೆಕ್ಕವಿಲ್ಲದಷ್ಟು ವೃಕ್ಷಗಳ ಮಾರಣಹೋಮ ನಡೆಸಿದರ
ಪರಿಣಾಮ ಇಂದು ಸರಿಯಾದ ಆಮ್ಲಜನಕ ಸಿಗದೇ ಕರೊನಾ ಸೋಂಕಿತರು ಸಾಯುವ ಪರಿಸ್ಥಿತಿ ಉದ್ಭವವಾಗಿದೆ ಮನುಷ್ಯ ಎಷ್ಟೆಲ್ಲ ಬೆಳೆದರು ಪ್ರಕೃತಿಯ ಮುಂದೆ ತೃಣಕ್ಕೆ ಸಮಾನ ಎಂಬುದು ಸಾಬೀತಾಗುತ್ತಲೆ ಬಂದಿದೆ ಎಷ್ಟೆಲ್ಲಾ ಮುಂದುವರೆದ ಮನುಷ್ಯ ಸಣ್ಣ ವೈರಾಣುವಿಗೆ ತುತ್ತಾಗುತ್ತಿರುವ ಕಾರಣ ಆಹಾರದಲ್ಲಿ ಸರಿಯಾದ ಪೌಷ್ಟಿಕಾಂಶ ಇಲ್ಲದೆ ವಿಷಪೂರಿತ ರಾಸಾಯನಿಕ ಸಿಂಪಡನೆ ಆಹಾರಧಾನ್ಯಗಳನ್ನು ಸೇವಿಸುವುದರ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿ ಇಲ್ಲದೆ ಅಪೌಷ್ಟಿಕ ಕೊರತೆ ಉಂಟಾಗಿ ಔಷಧಿಗಳಿಗೆ ಮೊರೆಹೋಗಿದ್ದಾನೆ ಹಣದಿಂದ ಏನೆಲ್ಲಾ ಕೊಳ್ಳಬಲ್ಲೆ ಎಂದು ಬೀಗುವ ಮನುಷ್ಯನ ಹುಚ್ಚುತನವನ್ನು ವಿಧಿ ಹುಚ್ಚು ಬಿಡಿಸಿದೆ ಸ್ವಾರ್ಥದ ಹಿಂದೆ ಓಡುತ್ತಿದ್ದ ಮಾನವನನ್ನು ತಡೆದು ಮಾನವೀಯತೆ ದೊಡ್ಡದು ಎಂಬ ಸತ್ಯವನ್ನು ಸಾರಿದೆ. ಭಾರತ ಕರೊನಾದೊಂದಿಗೆ ಹೋರಾಡಲು ವಾಕ್ಸಿನ್ ಶೋಧಿಸಿ ತನ್ನಂತೆಯೇ ಹೋರಾಡುತ್ತಿರುವ ಅನೇಕ ರಾಷ್ಟ್ರಗಳಿಗೆ ವ್ಯಾಕ್ಸಿನ್ ನೀಡಿದರ ಪರಿಣಾಮ ಇಂದು ಭಾರತ ಎರಡನೇ ಅಲೆಯ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವುದನ್ನು ಕಂಡ ಅನೇಕ ರಾಷ್ಟ್ರಗಳು ಸಹಾಯದ ಬರಪೂರವೆ ಭಾರತಕ್ಕೆ ಹರಿದುಬರುತ್ತಿದೆ ಭಾರತದೊಂದಿಗೆ ಹೆಗಲಿಗೆ ಹೆಗಲಾಗಿ ನಿಂತಿವೆ ಈಗೆನಿದ್ದರೂ ನಮ್ಮ-ನಿಮ್ಮೆಲ್ಲರ
ಕರ್ತವ್ಯ ಹೆಚ್ಚಾಗಿದೆ ಅಂದು ಭಾರತವನ್ನು ಸ್ವತಂತ್ರಗೊಳಿಸಲು ಮನೆ ಮನೆಯಿಂದ ಹೊರನಡೆದು ತಮ್ಮ ಪ್ರಾಣವನ್ನು ಅದೆಷ್ಟೋ ದೇಶಪ್ರೇಮಿಗಳು ತೆತ್ತಿದರೆ ಪರಿಣಾಮ ಭಾರತ ಇಂದು ಸ್ವತಂತ್ರ ಗೊಂಡಿದೆ ಕರೊನಾದಿಂದ ದೇಶವನ್ನು
ಸ್ವತಂತ್ರಗೊಳಿಸಲು ತಾವುಗಳು ತಮ್ಮ ತಮ್ಮ ಮನೆಯಲ್ಲೇ ಇದು ಘನ ಸರ್ಕಾರದ ನಿಯಮಾವಳಿಯನ್ನುಪಾಲಿಸುತ್ತಾ ರಾಷ್ಟ್ರದೊಂದಿಗೆ ನಿಲ್ಲಬೇಕಿದೆ ಅನೇಕ ಸಂಘ-ಸಂಸ್ಥೆಗಳು ಸ್ವಯಂಸೇವಕರು ಎಲ್ಲರೂ ಸ್ವಯಂ ಪ್ರೇರಿತರಾಗಿ ಸಹಾಯದ ಹಸ್ತ ನೀಡುತ್ತಿದ್ದಾರೆ ಕೆರೊನಾ ಓಡಿಸಲು ಹಗಲಿರುಳೆನ್ನದೆ ಡಾಕ್ಟರ್,ನರ್ಸ್ ಮೊದಲೇ ಸಾಲಿನ ಸೇವಕರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ನೀವೆಲ್ಲಾ ಅನುಸರಿಸಬೇಕಾದ ದಿವ್ಯ ಮಾರ್ಗವೊಂದಿದೆ ಅದುವೇ ಪ್ರಾರ್ಥನೆ. ಪ್ರಾರ್ಥನೆಗೆ ಮೀರಿದ ಶಕ್ತಿ ಇನ್ನೊಂದಿಲ್ಲ ನಾವೆಲ್ಲ ಆ ದಿಶೆಯಲ್ಲಿ ಸಾಗಬೇಕಿದೆ ಇಡಿಯ ವಿಶ್ವ ಕೆರೊನಾ ಮುಕ್ತವಾಗಲಿ ಎಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಕರೊನಾದ ವಿರುದ್ಧ ವಿಜಯ ಸಾಧಿಸಿ ಮತ್ತೆ ರಾಷ್ಟ್ರ ಕಟ್ಟಲು ತಯಾರಾಗೋಣ....
-ಅಮೃತೇಶ್ವರ ಶ್ರೀ
ಲೇಖಕರು,ಆಧ್ಯಾತ್ಮಿಕ ಚಿಂತಕರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ