ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರೀಮಠದ ಆತ್ಮೀಯ ಶಿಷ್ಯರು ಗ್ರಾಮದ ಕಳಶಪ್ರಾಯರಾದ ಶ್ರೀ ಬಸವನಗೌಡ ವಿ ಪಾಟೀಲ ಅವರ ಶಿವಗಣಾರಾಧನೆ.

ಶಿವಗಣಾರಾಧನೆ   29-6-2021 ಮಂಗಳವಾರ ಸಜ್ಜನರು ಸಾತ್ವಿಕರು ಸರಳ ಸಹಕಾರ ಮೂರ್ತಿಗಳು ಶ್ರೀಮಠದ ಆತ್ಮೀಯ ಶಿಷ್ಯರು ಗ್ರಾಮದ ಕಳಶಪ್ರಾಯರಾದ ಶ್ರೀ ಬಸವನಗೌಡ ವಿ ಪಾಟೀಲ ಅವರ ಅಗಲಿಕೆ ಶ್ರೀಮಠದ ಬಲವೇ ಕುಂದಿದಂತಾಗಿ ಗ್ರಾಮದ ಕಳಶ ಕಳಚಿದಂತಾಗಿದೆ ತಮ್ಮ ಇಡೀ ಜೀವಮಾನವನ್ನು ಜನರ ಹಿತಕ್ಕಾಗಿ ಶ್ರಮಿಸಿದವರು ಕಷ್ಟವೆಂದವರ ಪಾಲಿಗೆ ಪರಿಹಾರದ ಪ್ರತಿರೂಪವಾಗಿ ನಡತೆಯಲ್ಲಿ ನಯವಂತಿಕೆಯಿಂದ ನುಡಿಯಲ್ಲಿ ಸತ್ಯವಂತಿಕೆಯಿಂದ ಮೊಗದಲ್ಲಿ ನಗು ತುಂಬಿದ ದೈವಂ ತಿಕೆ ಕಳೆಯಿಂದ ಕೊಡಿ ಆದರ್ಶಮಯ ಜೀವನ ಸಾಗಿಸಿದ್ದೀರಿ ತಮ್ಮ ಇಡೀ ಮನೆತನವು ಹಸಿದವರಿಗೆ ಅನ್ನ ನೀಡುವ ದಾಸೋಹ ಕೇಂದ್ರವಾಗಿ ಸಾಧು-ಸಂತರ ಮತ್ತು ಮಠಮಾನ್ಯಗಳ ಪಾಲಿಗೆ ಆಸ್ತಿಯಾಗಿ ಬದುಕಿದಂತ ವ್ಯಕ್ತಿತ್ವ ನಿಮ್ಮದು ಅಂತಹ ವ್ಯಕ್ತಿ ಇಲ್ಲವೆಂಬುದನ್ನು ನಮಗೆಲ್ಲಾ ನೋವುಂಟು ಮಾಡಿದೆ ಶ್ರೀ ಮಠದ ಪರಂಪರೆಯ ಉದ್ದಕ್ಕೂ ಭಕ್ತ ಮಹಾಶಯರ ಪಂತಿಯಲ್ಲಿ ಮೊದಲ  ಸ್ಮರಣೆಯಾಗಿ ಇರುವಿರಿ ನಿಮ್ಮಂತ ಶ್ರೇಷ್ಠ ಶಿಷ್ಯರನ್ನು ಪಡೆದ ಶ್ರೀಮಠವು ಹೆಮ್ಮೆ ಪಡುತ್ತದೆ ತಮ್ಮ ಆತ್ಮಕ್ಕೆ ಶ್ರೀ ಗುರು ಹಾಲೇಶ್ವರರು ಮುಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ ಓಂ ಶಾಂತಿ ಶಾಂತಿ ಶಾಂತಿಃ...

ಕರೋನಾ ಬಲಿಷ್ಠವಾಗಿದೆ ಅರ್ಥವೆಂದಲ ಆದರೆ ಅದಕ್ಕೆ ಸಿಕ್ಕ ಬಾರಿ ಪ್ರಚಾರ ಮಾತ್ರ ಎಲ್ಲರ ನಿದ್ದೆಗೆಡಿಸಿದೆ.

ಜಗತ್ತಿನ ತಂತ್ರಜ್ಞಾನದ ವೇಗ ರೆಪ್ಪೆ ಮಿಟುಕಿಸಿ ಕಣ್ಣು ಬಿಡುವಷ್ಟರಲ್ಲಿ ಇದ್ದದ್ದನ್ನು ಇಲ್ಲವಾಗಿಸಿ ಇಲ್ಲದ್ದನ್ನು ಇರುವಂತೆ ಸೃಷ್ಟಿಸುವ ಮಾನವ ಬುದ್ಧಿಶಕ್ತಿಗೆ ದೇವನ ಬೆರಗಾಗಬಲ್ಲ ಮಾನವ ತನ್ನಂತೆ ಹೋಲುವ ಯಂತ್ರದ ಮನುಷ್ಯನ ಕಂಡುಹಿಡಿದ ಗಾಳಿಯಲ್ಲಿ ಪಕ್ಷಿಯಂತೆ ಹಾರಾಡಿದ ನೀರಿನಲ್ಲಿ ಮೀನಿನಂತೆ ಈಜಿದ ವಿಶ್ವದ ಮೂಲೆ ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕಿಸ ಬಲ್ಲ ಸಾಧನ ಕಂಡುಹಿಡಿದ ಅದು ಸಾಲದೆ ಅನ್ಯಗ್ರಹಕ್ಕೂ ಹೋಗಿ ಬರುತ್ತಿದ್ದಾನೆ  ಏನೆಲ್ಲವನ್ನು ಸಾಧಿಸಿದ ಮಾನವ ಮಾತ್ರ ಮಾನವಾನಗಿ ಉಳಿದಿಲ್ಲ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶಮಾಡಿದ ಸಂಸ್ಕೃತಿಯನ್ನು ಹದಗೆಡಿಸಿದ  ಬಳಸಬೇಕಾದ ವಸ್ತುವನ್ನು ಪ್ರೀತಿಸಿದ ಪ್ರೀತಿಸ ಬೇಕಾದ ವಸ್ತುವನ್ನು ಬಳಸಿದ ಕೊನೆಗೆ ಮನುಷ್ಯ ಮನುಷ್ಯನನ್ನು ಕೊಂದು ಬದುಕುತ್ತಿದ್ದಾನೆ ಸಿರಿ, ಸಂಪತ್ತು ,ಅಧಿಕಾರ, ಆಳ್ವಿಕೆ ಎಲ್ಲವೂ ತನಗೆ ಸೇರಬೇಕೆಂಬ ದುರಾಸೆತನ. ಅದೇ ಹಾದಿಯಲ್ಲಿ ಚೀನಾವು ಸಾಗುತ್ತಿದೆ ವಿಶ್ವವೇ ತನ್ನ ಹಿಡಿತದಲ್ಲಿರಬೇಕು ತನ್ನಲ್ಲಿ ಸಹಾಯಕ್ಕಾಗಿ ಅಂಗಲಾಚಿ  ನಿಲ್ಲಬೇಕೆಂಬ ದುಷ್ಟ ಬುದ್ಧಿಯಿಂದ ವಿಶ್ವದ ತುಂಬೆಲ್ಲಾ ಜೈವಿಕ ಯುದ್ಧವನ್ನು ಸಾರಿದೆ ತಾನೇ ನಿರ್ಮಿಸಿದ ಕೋವಿಡ್ 19 ವೈರಾಣುವನ್ನು ಎಲ್ಲೆಡೆ ಪಸರಿಸಿದ ಪರಿಣಾಮ ಇಡೀ ವಿಶ್ವವೇ ತಲ್ಲಣಿಸಿದೆ ದೇಹ ದೌರ್ಬಲ್ಯ ಗೊಂಡರೆ ದೇಶ ತನ್ನಿಂದ ತಾನೇ ದುರ್ಬಲಗೊಳ್ಳುತ್ತದೆ ಎಂಬ ದೂರಲೋಚನೆಯಿಂದ ಮನುಕುಲಕ್ಕೆ ದ್ರ...