ವಿಷಯಕ್ಕೆ ಹೋಗಿ

Doni Halaswamy jatre 2018

ಶ್ರೀ ಜಗದ್ಗುರು ಪಂಚಾಚಾರ್ಯಃ ಪ್ರಸಿದಂತು
ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಪ್ರಸಿದಂತು

(ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ .
ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ.)

ಗದಗ ಜಿಲ್ಲಾ ಮುಂಡರಗಿ ತಾಲೂಕು ಡೋಣಿ ಹಾಗೂ ಡೋಣಿ ತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 19ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಷ.ಬ್ರ.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಹಲಗೂರು ತಾಲ್ಲೂಕು ಮಳವಳ್ಳಿ ಇವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ಮತ್ತು ಧರ್ಮಸಭೆ

ಕಾರ್ಯಕ್ರಮಗಳು
ದಿನಾಂಕ :-13/03/2018 ನೇ ಮ‌ಂಗಳವಾರ ಬೆಳಿಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು.

ದಿನಾಂಕ :-15/03/2018 ನೇ ಬುಧವಾರ ಸಾಯಂಕಾಲ 4-00 ಘಂಟೆ ಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.

ದಿನಾಂಕ :-18/03/2018 ನೇ ರವಿವಾರ ಬೆಳಗ್ಗೆ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃರು ಗದ್ದುಗಿಗೆ ಮಹಾರುದ್ರಾಭಿಷೇಕ ತದನಂತರ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ
ಶ್ರೀ ಷ.ಬ್ರ.ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇವಡ್ಡಟ್ಟಿ ಇವರಿಂದ ಮುಂಜಾನೆ 11-45 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುವ ರಾತ್ರಿ 10-30 ಗಂಟೆಗೆ ಮುಳ್ಳುಗದ್ದುಗೆ ಮಹೋತ್ಸವ ನೆರವೇರುವುದು.

ದಿನಾಂಕ :-19/03/2018 ನೇ ಸೋಮವಾರ ಬೆಳಿಗ್ಗೆ 10-30 ಗಂಟೆಗೆ ಮಹಾಲಿಂಗ ಗೌಡ್ರು ಹಳೆಮನೆ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ ,ನಾಗಪ್ಪ ಹರ್ತಿ ಇವರ ಮನೆ ಗೆ ತೇಜಿ ಭಿನ್ನ,
ಸಾಯಂಕಾಲ 4-00 ಗಂಟೆಗೆ ರಥೋತ್ಸವ ಜರುಗುವುದು ಹಾಗೂ ರಾತ್ರಿ 8-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.

ದಿನಾಂಕ :-20/03/2018 ನೇ ಮಂಗಳವಾರ ಬೆಳಿಗ್ಗೆ 10-00 ಗಂಟೆಗೆ ಶ್ರೀ ಷ.ಬ್ರ.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಹಲಗೂರು ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡು ಶ್ರೀ ಹಾಲೇಶ್ವರ ಮಠಕ್ಕೆ ಆಗಮಿಸುವುದು ತದನಂತರ ಧರ್ಮಸಭೆ, ಗುರುರಕ್ಷೆ ,ಶ್ರೀ ಹಾಲ ಸೋಮೇಶ್ವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ,ಈರಪ್ಪ ಕ,ಮೇಟಿ ಸಾ/ಗೋಗೇರಿ ತಾ/ ರೋಣ ಇವರ ಕುಟುಂಬ ವರ್ಗದವರಿಂದ ಶ್ರೀ ಷ.ಬ್ರ.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಹಲಗೂರು ಇವರಿಗೆ ತುಲಾಭಾರ ಸೇವೆ ನೆರವೇರುವುದು ರಾತ್ರಿ 8-00 ಗಂಟೆಗೆ ಕಡುಬಿನ ಕಾಳಗ ಜರಗುವುದು.
ರಾತ್ರಿ 10-30 ಗಂಟೆಗೆ ಶ್ರೀ ಹಾಲೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಗೂಳಿ ಬಸವೇಶ್ವರ ನಾಟ್ಯ ಸಂಘದವರಿಂದ ಬಡವನ ಒಡಲು ಬೆಂಕಿಯ ಸಿಡಿಲು ಸಾಮಾಜಿಕ ನಾಟಕ ಜರುಗುವುದು .
ಈ ಎಲ್ಲ ಕಾರ್ಯಕ್ರಮಗಳು ಡೋಣಿ ಹಾಗೂ ಡೋಣಿ ತಂಡದ ಸಮಸ್ತ ಸದ್ಭಕ್ತರಿಂದ ಹಾಗೂ ಶ್ರೀ ಶಕ್ತಿ ಸಂಘಗಳು ಯುವಕ ಮಂಡಳಿಗಳು ಭಜನಾ ಸಂಘಗಳು ಇವರಿಂದ ನೆರವೇರುವುದು.

ಸ್ವಾಗತ ಕೋರುವವರು ಶ್ರೀ ಹಾಲೇಶ್ವರ ದೇವಸ್ಥಾನ ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು

*ಸಾಮೂಹಿಕ ವಿವಾಹ ನೋಂದಣಿಗಾಗಿ ಸಂಪರ್ಕಿಸಿ*
ಶರಣಪ್ಪ ಜಂತ್ಲಿ :- 9008697905
ಎಸ್ಎಚ್ ಸಂದಿ ಗೌಡ್ರು :-7026181982
ರಮೇಶ್ ಗಾಳಪ್ಪನವರ :-7353437419
ರವಿ ಈಳಿಗೇರ :-9845308808
ವಿನಾಯಕ್ ಬೆಳ್ಳಿ :-9731530273.

*ಸ್ವಾಗತ ಕೋರುವವರು :- ಶ್ರೀ ಹಾಲೇಶ್ವರ ದೇವಸ್ಥಾನ ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು.
*** ಸರ್ವರಿಗೂ ಆದರದ ಸ್ವಾಗತ***





































































































































































































































Shri Halasomeshwar Charitre Book 



Shri Halasomeshwar Charitre Book-2018

Shri Halasomeshwar Charitre Book


Shri Halasomeshwar Charitre Book-Author-Kumar Eliballi,Doni






















































































ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ"

 ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  "ಪೂರ್ವ ಸಿದ್ಧತಾ ಸಭೆ" ಶ್ರೀಮಠದ ಭಕ್ತಾಭಿಮಾನಿಗಳೇ, ದಿ,30/03/2025 ನೇ ರವಿವಾರ ರಿಂದ , ದಿ,1,042025 ನೇ ಮಂಗಳವಾರ ನಡೆಯುವ ಶ್ರೀ ಗುರು ಹಾಲಸೋಮೇಶ್ವರ  ಸಾನಿಧ್ಯದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಮತ್ತು ಶ್ರೀ ಮಠದ ಸಮಸ್ತ ಸದ್ಭಕ್ತರ ಸೇವೆ ಸಹಕಾರದೊಂದಿಗೆ ಪ್ರತಿ ವರ್ಷದ ಪದ್ದತಿಯಂತೆ ಶ್ರೀ ಗುರು ಹಾಲಸ್ವಾಮಿ ಮಠದ ಪರಂಪರೆಯ ಜಾತ್ರೋತ್ಸವ ,ಧರ್ಮ ಜಾಗೃತಿ ಸಮಾರಂಭನಡೆಸಬೇಕೆನ್ನುವ ವಿಚಾರವನ್ನು ಈಗಾಗಲೇ ಯುಗಾದಿ ಪಾಂಡ್ಯ ಅಮವಾಸ್ಯೆ ಶುಭದಿನ ಎಲ್ಲಾ ಸದ್ಭಕ್ತರಿಗೆ ತಿಳಿಸಿದಂತೆ ದಿನಾಂಕ ಮತ್ತು ಸಮಾರಂಭ ಪತ್ರಿಕೆ ತಯಾರಿಸಲಾಗಿದೆ. ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಮಸ್ತ ಸದ್ಭಕ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ, ಕಾರ್ಯಕ್ರಮದ ಸಲಹೆ ಸೂಚನೆಗಳನ್ನು ನೀಡಬೇಕೆಂದು ಈ ಮೂಲಕ ಉಭಯ ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ತಿಳಿಸುತ್ತಿದ್ದೆವೆ. ಸಭೆಯ ದಿನಾಂಕ: 20.02-2025ನೇ   ಮತ್ತು 21-02-2925 ಸಮಯ: ಸಂಜೆ 5:10  ಸ್ಥಳ:- ಹಾಲೇಶ್ವರ ದೇವಸ್ಥಾನ  ಇಂತಿ ತಮ್ಮ ವಿಶ್ವಾಸಿ ಶ್ರೀ ಹಾಲೇಶ್ವರ ಭಜನಾ ಸಂಘ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ

Doni Halaswamy Jatre Mahotsava-2025 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೫

ಜಾತ್ರಾ  ಕಾರ್ಯಕ್ರಮದ ಆಹ್ವಾನ ಪತ್ರಿಕೆ ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ, ಸಾಮೂಹಿಕ ವಿವಾಹಗಳು, ದೀಕ್ಷಾ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ. ದಿನಾಂಕ 20.03.2025ನೇ ಗುರುವಾರರಂದು ರಾತ್ರಿ 8:00 ಕ. ಗ್ರಾಮದ ಸಕಲ ಸದ್ಭಕ್ತರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಈ ವರ್ಷದ ಹಾಲಪ್ಪಜ್ಜನ ಜಾತ್ರೆಯ ರಣಗಂಬ ಸ್ಥಾಪಿಸುವ ಮೂಲಕ ವಿದ್ಯುಕ್ತವಾಗಿ ಜಾತ್ರಾ ವಿಧಿ ವಿಧಾನಗಳು ಆರಂಭವಾಗುತ್ತವೆ. ರಣಗಂಬ  ದಿನಾಂಕ: 27-03-2025ನೇ ಗುರುವಾರರಂದು ಸಾಯಂಕಾಲ 4-00 ಗಂಟೆಗೆ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ(ksrtc) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು. ದಿನಾಂಕ: 30-03-2025ನೇ ರವಿವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃ ಗದ್ದುಗಿಗೆ ಮಹಾರುದ್ರಾಭಿಷೇಕ.  ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ  ಹಾಗೂ ಅಯ್ಯಾಚಾರ ಕಾರ್ಯಕ್ರಮ,  ಶ್ರೀ ಷ||ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ  ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳುಗದ್ದುಗೆ ಮಹೋತ್ಸವ ನೆರವೇರ...

Doni Halaswamy Jatre Mahotsava-2024 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೪

  ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 25ನೇ ವರ್ಷದ ರಜತ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ  ಆಹ್ವಾನ ಪತ್ರಿಕೆ.                                   ಕಾರ್ಯಕ್ರಮಗಳು ದಿನಾಂಕ: 06-04-2024ನೇ ಶನಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC)  ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.. ದಿನಾಂಕ: 09-04-2024ನೇ ಮಂಗಳವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ  ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ  ಕರ್ತೃುಗದ್ದುಗಿಗೆಮೂರ್ತಿಗೆ  ಮಹಾರುದ್ರಾಭಿಷೇಕ ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಶ್ರೀ ಷ.ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ. ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳು ಗದ್ದುಗೆ ಮಹೋತ್ಸವ ನೆರವೇರುವುದು.  ದಿನಾಂಕ: 10-04-2024ನೇ ಬುಧವಾರದಂದು ಬೆಳಗ್ಗೆ  1...