ಜಾತ್ರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 26ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ, ಸಾಮೂಹಿಕ ವಿವಾಹಗಳು, ದೀಕ್ಷಾ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ. ದಿನಾಂಕ 20.03.2025ನೇ ಗುರುವಾರರಂದು ರಾತ್ರಿ 8:00 ಕ. ಗ್ರಾಮದ ಸಕಲ ಸದ್ಭಕ್ತರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಈ ವರ್ಷದ ಹಾಲಪ್ಪಜ್ಜನ ಜಾತ್ರೆಯ ರಣಗಂಬ ಸ್ಥಾಪಿಸುವ ಮೂಲಕ ವಿದ್ಯುಕ್ತವಾಗಿ ಜಾತ್ರಾ ವಿಧಿ ವಿಧಾನಗಳು ಆರಂಭವಾಗುತ್ತವೆ. ರಣಗಂಬ ದಿನಾಂಕ: 27-03-2025ನೇ ಗುರುವಾರರಂದು ಸಾಯಂಕಾಲ 4-00 ಗಂಟೆಗೆ ಶ್ರೀ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ(ksrtc) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು. ದಿನಾಂಕ: 30-03-2025ನೇ ರವಿವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃ ಗದ್ದುಗಿಗೆ ಮಹಾರುದ್ರಾಭಿಷೇಕ. ತದನಂತರ ಬೆಳಿಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ, ಶ್ರೀ ಷ||ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ ಇವರ ನೇತೃತ್ವದಲ್ಲಿ ಜರುಗುವುದು. 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳುಗದ್ದುಗೆ ಮಹೋತ್ಸವ ನೆರವೇರ...
ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ,ಜಿಲ್ಲಾ ಗದಗ,ತಾಲ್ಲೂಕು ಮುಂಡರಗಿ, ಡೋಣಿ