ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡೋಣಿ ಗ್ರಾಮದಲ್ಲಿ ನೂತನ ಶ್ರೀ ದ್ಯಾಮಮ್ಮ, ಶ್ರೀ ದುರ್ಗಾದೇವಿ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮಗಳು

Tv9 Kannada Reports Jatre Links click on " ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾದಕೆ ಶರಣು ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ." ಗದಗ ಜಿಲ್ಲಾ ಪುಣ್ಯಕ್ಷೇತ್ರ ಡೋಣಿ ಗ್ರಾಮದಲ್ಲಿ ಶ್ರೀ ಜಗನ್ಮಾತೆ ದುರ್ಗಾದೇವಿಯ ಮತ್ತು ದ್ಯಾಮವ್ವ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ದೇವಸ್ಥಾನ ಉದ್ಘಾಟನೆ ಹಾಗೂ ರಾಜಗೋಪುರದ ಕಳಸಾರೋಹಣ ಅತ್ಯಂತ ಯಶಸ್ವಿಯಾಗಿ ನಡೆಯಿತು. ಭವ್ಯ ಕಾರ್ಯಕ್ರಮದ ದಿವ್ಯ ಅಧ್ಯಕ್ಷತೆಯನ್ನು ಪರಮಪೂಜ್ಯ ಸದ್ಗುರು ಶಿವಯೋಗಿ ಶ್ರೀ ಹಾಲ ಸೋಮೇಶ್ವರ ಮಹಾ ಸ್ವಾಮೀಜಿಯವರು ಈ ಕಾರ್ಯಕ್ರಮಗಳ ದಿವ್ಯ  ಸಾನಿಧ್ಯವನ್ನು ಪರಮಪೂಜ್ಯ ಮರುಳಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು, (ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ ಅಳವಂಡಿ,ಹೊಳಗುಂದಿ, ಭಾವಿಹಳ್ಳಿ.) ಪಾವನ ಸಾನಿಧ್ಯವನ್ನು ಶ್ರೀ ವಿಶ್ವರಾಧ್ಯ ಹಾಲಸ್ವಾಮಿಗಳವರು ವಹಿಸಿಕೊಂಡಿದ್ದರು. ಪ್ರಾತಃಕಾಲದಲ್ಲಿ ಗ್ರಾಮದ ಮಧ್ಯೆ ಇರುವ ದೇವಿಯ ನೂತನ ದೇವಾಲಯದಲ್ಲಿ ಹೋಮ ಹವನ ನವಗ್ರಹ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶ್ರೀ ಗುರು ಹಾಲೇಶ್ವರ ಮಠದ ಪಕ್ಕದಲ್ಲಿರುವ ಶ್ರೀದೇವಿಯ ದೇವಸ್ಥಾನದಲ್ಲಿ ನೂತನ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಅತ್ಯಂತ ಸಾಂಗವಾಗಿ ಜರುಗಿದವು. ಈ ಕಾರ್ಯಕ್ರಮ ಡೋಣಿ ಗ್ರಾಮದ ಸಕಲ ಸದ್ಭಕ್ತರ ಭಕ್ತಿಯ ದ್ಯೋತಕವಾಗಿ ಕಂಡು ಬಂತು. ಡೊಳ್ಳಿನ ಮೇಳಗಳು ದೇವಿಯ ಜೈಕಾರ...