ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 22ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ"-2021

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 22ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  "ಪೂರ್ವ ಸಿದ್ಧತಾ ಸಭೆ" ಶ್ರೀಮಠದ ಭಕ್ತಾಭಿಮಾನಿಗಳೇ, ಮೇಲ್ಕಂಡ ಐತಿಹಾಸಿಕ ಕಾರ್ಯಕ್ರಮದ ಸಲುವಾಗಿ ಶ್ರೀಮಠದ ಭಕ್ತರ ಹಾಗೂ ಶಿಷ್ಯರ “ಪೂರ್ವ ಸಿದ್ಧತಾ ಸಭೆಯೊಂದನ್ನು ಕರೆಯಲಾಗಿದ್ದು, ತಾವುಗಳು ಈ ಸಭೆಗೆ ಆಗಮಿಸಿ, ತಮ್ಮ ಅನಿಸಿಕೆ, ಸಲಹೆ, ಸೂಚನೆಗಳನ್ನು, ಇತ್ಯಾದಿಗಳ ಮೂಲಕ ಮಾರ್ಗದರ್ಶನವನ್ನು ನೀಡಬೇಕೆಂದು ಕೋರುತ್ತೆವೆ, ಶ್ರೀ ಹಾಲ ಸೋಮೇಶ್ವರ ಮಹಾಸ್ವಾಮಿಗಳವರ ಸಂಕಲ್ಪದಂತೆ ನೆರವೇರಿಸುವುದು ನಮ್ಮೆಲ್ಲರ ಕರ್ತವ್ಯವಾದ್ದರಿಂದ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ, ಶ್ರೀ ಕ್ಷೇತ್ರ ನಾಥ ಹಾಲೇಶ್ವರನನ್ನು ಮತ್ತು ಉಭಯ ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ, ಸಭೆಯ ದಿನಾಂಕ: -15-02-2021ನೇ ಸೋಮವಾರ ಸಮಯ: ಸಂಜೆ 5:10  ಸ್ಥಳ:- ಹಾಲೇಶ್ವರ ದೇವಸ್ಥಾನ  ಇಂತಿ ತಮ್ಮ ವಿಶ್ವಾಸಿ ಶ್ರೀ ಹಾಲೇಶ್ವರ ಭಜನಾ ಸಂಘ ಲಕ್ಷ್ಮಣ ಕಾವಲಿ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ ಕಾರ್ಯದರ್ಶಿಗಳು ಶರಣಪ್ಪ ಹಾಲಪ್ಪ ಸಂದಿಗೌಡ್ರು 

Doni Halaswamy Jatre 2021

ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 22ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ pdf📂 ಕಾರ್ಯಕ್ರಮಗಳು ದಿನಾಂಕ: 3-04-2021ನೇ ಶನಿವಾರ ಬೆಳಿಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು. ದಿನಾಂಕ: 10-04-2021ನೇ ಶನಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.. ದಿನಾಂಕ: 13-04-2021ನೇ ಮಂಗಳವಾರ ಬೆಳಿಗ್ಗೆ  ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃುಗದ್ದುಗಿಗೆ ಮಹಾರುದ್ರಾಭಿಷೇಕ ತದನಂತರ  11:45 ಕ್ಕೆ  ಸಾಮೂಹಿಕ ವಿವಾಹಗಳು  ಜರುಗುವವು. ರಾತ್ರಿ 10:30 ಕೈ ಮುಳ್ಳುಗದ್ದುಗೆ  ಮಹೋತ್ಸವ ನೆರವೇರುವುದು.  ದಿನಾಂಕ: 14-04-2021ನೇ ಬುಧವಾರ ಬೆಳಿಗ್ಗೆ 10-30 ಕ್ಕೆ ಮಹಾಲಿಂಗನ ಗೌಡರ ಹಳೆಮನೆ ಇವರ ಮನೆಗೆ  ಶ್ರೀಗಳ ಸವಾರಿ ಭಿನ್ನ, ನಾಗಪ್ಪ ಹರ್ತಿ ಇವರ ಮನೆಗೆ ತೇಜಿ ಭಿನ್ನ ಸಾಯಂಕಾಲ  4-00 ಗಂಟೆಗೆ  ರಥೋತ್ಸವ  ಜರಗುವುದು ಹಾಗೂ ರಾತ್ರಿ 8-00 ಗಂಟೆಗೆ  ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.  ದಿನಾಂಕ: 15-04-2021ನೇ ಗುರುವಾರ ಬೆಳಿಗ್ಗೆ ...