ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2006 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಿರೇವಡ್ಡಟ್ಟಿ ಗ್ರಾಮದಲ್ಲಿ ಶ್ರೀ ಗುರು ಹಾಲಸ್ವಾಮಿಗಳವರ ನೂತನ ಗದ್ದುಗೆ ಸ್ಥಾಪನೆ

"ಸಾಹಿತ್ಯ, ಸಂಸ್ಕೃತಿ ಸಂವರ್ಧಿಸಲಿ  ಸರ್ವರಿಗೂ ಶಾಂತಿ ಲಭಿಸಲಿ" "ಮಾಗದ ಧರ್ಮಕ್ಕೆ ಜಯವಾಗಲಿ  ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" "ಹಾಲೇಶ್ವರ ದೊರೆಯೇ ನಿನಗಾರು ಸರಿಯೇ ಸರಿಸರಿ ಎಂದವರ ಹಲ್ಲು ಮುರಿಯೇ ಬಹು ಪರಾಕ" "ರಾಂಪುರದ ಹಾಲೇಶ್ವರ ಬಹು ಪರಾಕ ಬಹು ಪರಾಕ" ಶ್ರೀ ಶ್ರೀ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಂ ಸನ್ನಿಧಾನೇನ ಕೃಪಾ ಪಾತ್ರರಾದ ಧನ, ಕನಕ ವಸ್ತು, ವಾಹನ, ಕಳತ್ರ, ಪುತ್ರ, ಮಿತ್ರ, ಪೌತ್ರಾಭಿ, ಸಕಲ ಸಂಪತ್ತು ಸಮೃದ್ಧಿರಸ್ತು |  ಗದಗ ಜಿಲ್ಲಾ ಮುಂಡರಗಿ ತಾಲೂಕಾ ಹಿರೇವಡ್ಡಟ್ಟಿ ಗ್ರಾಮದಲ್ಲಿ ಪವಾಡ ಪುರುಷ ಲಿಂಗೈಕ್ಯ ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಮಹಾಸ್ವಾಮಿಗಳು, ಹಿರೇಹಡಗಲಿ ಇವರ ಅಪ್ಪಣೆಯ ಮೇಲಿಗೆ ಹಿರೇವಡ್ಡಟ್ಟಿ ಗ್ರಾಮದಲ್ಲಿ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಸ್ವಾಮಿಗಳು ಹಾಗೂ ಸಕಲ ಸದ್ಭಕ್ತರ ಅಪೇಕ್ಷೆಯಂತೆ ಗ್ರಾಮದ ಸಿಹಿ ನೀರಿನ ಬಾವಿ ಹತ್ತಿರ ಶ್ರೀಗಳ ಜಾಗೆಯಲ್ಲಿ ಹಾಲಸೋಮೇಶ್ವರ ಸ್ವಾಮಿಗಳವರ ನೂತನ ಗದ್ದುಗೆ ಪ್ರತಿಸ್ಥಾಪನೆ  ದಿನಾಂಕ : ೧೧-೫-೨೦೦೬ ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ಹಿರೇವಡ್ಡಟ್ಟಿ ಪಟ್ಟಾಧ್ಯಕ್ಷರಿಂದ ಶ್ರೀಗುರು ಹಾಲಸ್ವಾಮಿಗಳವರ ನೂತನ ಗದ್ದುಗೆ ಸ್ಥಾಪನೆ, ರುದ್ರಾಭೀಷಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಕಾರ್ಯಕ್ರಮಗಳು : ದಿನಾಂಕ 11-5 -2006 ಗುರುವಾರ ಬೆಳಿಗ್ಗೆ 7-25 ರಿಂದ 9-25 ರವರೆಗೆ ನೂತನ ಗದ್ದುಗೆ ಪ್ರತಿಷ್ಠಾಪನೆ...